Karnataka Weather: ಬಿಸಿಲು, ಸೆಖೆ ತಡೆಯಲಾಗುತ್ತಿಲ್ಲ, ಈ ವರ್ಷ ಮಳೆಗಾಲ ಯಾವಾಗ ಶುರು ನೋಡಿ
ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಹಾಗಿದ್ದರೂ ತಾಪಮಾನವೇನೂ ಕಡಿಮೆಯಿಲ್ಲ. ಈಗಾಗಲೇ ಹವಾಮಾನ ವರದಿಗಳು ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಸೂಚನೆ ನೀಡಿವೆ.
ಹವಾಮಾನ ಮೂಲಗಳ ಪ್ರಕಾರ ಈ ಬಾರಿ ಬೇಗನೇ ಮುಂಗಾರು ಆಗಮನವಾಗಲಿದೆ. ಮೇ ಆರಂಭದಿಂದಲೇ ಮಳೆ ಶುರುವಾಗಲಿದೆ. ಆದರೆ ಸರಿಯಾಗಿ ಮುಂಗಾರು ಮಳೆ ಮೇ ಕೊನೆಯ ವಾರದಲ್ಲಿ ಅಂದರೆ ಮೇ 25 ರ ಬಳಿಕ ಆಗಮಿಸಲಿದೆ ಎಂದು ತಿಳಿದುಬಂದಿದೆ.
ಈ ಬಾರಿ ಮೇಯಿಂದ ಅಕ್ಟೋಬರ್ ವರೆಗೂ ಉತ್ತಮ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ನೆರೆ ಭೀತಿಯೂ ಇದೆ ಎಂದು ಹವಾಮಾನ ವರದಿಗಳು ಈಗಾಗಲೇ ಎಚ್ಚರಿಕೆ ನೀಡಿವೆ. ಆದರೆ ಅದಕ್ಕೆ ಮೊದಲು ಈಗ ತಾಪಮಾನ ಏರಿಕೆಯ ಪರಿಣಾಮವನ್ನು ಎದುರಿಸಲೇಬೇಕಿದೆ.