ಫಲಿಸಿತು ಕರುನಾಡ ಜನರ ಪ್ರಾರ್ಥನೆ: ಬೋರ್‌ವೆಲ್‌ನಿಂದ ಯಶಸ್ವಿಯಾಗಿ ಬಾಲಕನ ರಕ್ಷಣೆ

Sampriya

ಗುರುವಾರ, 4 ಏಪ್ರಿಲ್ 2024 (14:01 IST)
Photo Courtesy X
ವಿಜಾಯಪುರ:  ಸತತ 20 ಗಂಟೆಗಳ ಕಾರ್ಯಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ  ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು. ಈ ಮೂಲಕ ಕೋಟ್ಯಾಂತರ ಮಂದಿಯ ಪ್ರಾರ್ಥನೆ ಫಲಿಸಿತು.

ಸದ್ಯ ಮಗುವಿನ ಆರೋಗ್ಯ ತಪಾಸಣೆಗೆ ಮಂಡಿ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ತಾಯಿ ಪೂಜಾ ಕೂಡಾ ಮಗುವಿನ ಜತೆ ಆಸ್ಪತ್ರೆಗೆ ತೆರಳಿದ್ದಾರೆ.

ನಿನ್ನೆ ಸಂಜೆ ಆಟವಾಡುತ್ತಿದ್ದ ಮಗು ತೆರೆದ ಬೋರ್‌ವೆಲ್‌ಗೆ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡಿದೆ. ಇಂದು ಬೆಳಗ್ಗೆ ಬೊರ್‌ವೆಲ್‌ಗೆ ಇಳಿಸಿದ ಕ್ಯಾಮೆರಾದಲ್ಲಿ ಮಗು ಕಾಲನ್ನು ಅಲ್ಲಾಡಿಸುತ್ತಿರುವುದು ಕಂಡುಬಂದಿದೆ.

ಅದಲ್ಲದೆ ಬೆಳಿಗ್ಗೆ ಮಗು ಅಳುತ್ತಿರುವುದು ಕೇಳಿಸಿದೆ. ನಿರಂತರ ಶ್ರಮ ಹಾಗು ಕರುನಾಡ ಜನರ ಪ್ರಾರ್ಥನೆಯಿಂದ ಸಾತ್ವಿಕ್‌ನನ್ನು ಇದೀಗ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ