ಕಳೆದ ರಾತ್ರಿ ವಾಟ್ಸಾಪ್, ಇನ್‌ಸ್ಟಾಗ್ರಾಂ ಡೌನ್, ಬಳಕೆದಾರರ ಪರದಾಟ

Sampriya

ಗುರುವಾರ, 4 ಏಪ್ರಿಲ್ 2024 (11:13 IST)
Photo Courtesy X
ನವದೆಹಲಿ:  ಮೆಟಾ ಒಡೆತನದ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ನಿನ್ನೆ ರಾತ್ರಿ ಭಾರತ ಸೇರಿದಂತೆ ಇತರ ದೇಶಗಳಲ್ಲೂ ಡೌನ್ ಆಗಿದ್ದು, ಬಳಕೆದಾರರು ಕೆಲ ಗಂಟೆಗಳ ಕಾಲ ಪರದಾಡಿದ್ದಾರೆ. ಇನ್ನೂ ಸಮಸ್ಯೆ ಉದ್ಭವಿಸಿದ ಕೆಲ ಗಂಟೆಗಳ ನಂತರ ನೆಟ್‌ವರ್ಕ್‌ನ್ನು ಮರುಪಡೆಯುವಲ್ಲಿ ಮೆಟಾ ಯಶಸ್ವಿಯಾಯಿತು.

ಇನ್ನೂ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಡೌನ್ ಆಗಿರುವ ಬಗ್ಗೆ ಬಳಕೆದಾರರು ಟ್ವಿಟ್ಟರ್‌ನಲ್ಲಿ  ಮೀಮ್ಸ್‌ ಮಾಡಿ ಟ್ರೋಲ್ ಮಾಡಿದ್ದರು.

ಬಳಕೆದಾರರಿಗೆ ಸಂದೇಶ ಕಳುಹಿಸುವಾಗ, ಕರೆ ಮಾಡುವಾಗ, ಫೋಟೋ, ವಿಡಿಯೋ ಶೇರ್ ಮಾಡುವಾಗ ಸಮಸ್ಯೆ ಕಾಣಿಸಿಕೊಂಡಿದೆ. .

ಭಾರತದಲ್ಲಿ 30,000 ಕ್ಕೂ ಹೆಚ್ಚು ಬಳಕೆದಾರರು, ಯುನೈಟೆಡ್ ಕಿಂಗ್‌ಡಮ್‌ನಲ್ಲಿ 67,000 ಕ್ಕೂ ಹೆಚ್ಚು ಮತ್ತು ಬ್ರೆಜಿಲ್‌ನಲ್ಲಿ 95,000 ಬಳಕೆದಾರರು ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದಾರೆ. ಯುಎಸ್‌ಯಲ್ಲಿ  3,200 ಜನರು ಇನ್‌ಸ್ಟಾಗ್ರಾಂನಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ.

ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಮೆಟಾ, "ಕೆಲವರು ಇದೀಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ನಮಗೆ ತಿಳಿದಿದೆ, ಸಾಧ್ಯವಾದಷ್ಟು ಬೇಗ ಎಲ್ಲರಿಗೂ ಶೇ 100% ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುತ್ತೇನೆ ಎಂದು ಬರೆದುಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ