ಬೆಂಗಳೂರು: ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕನ್ನಡ ನಾಡು ನುಡಿಯ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿರಲಿಲ್ಲ. ಕನ್ನಡ ಸಾಹಿತ್ಯದಲ್ಲಿ ರಾಜಕೀಯ ನುಸಿರಿರುವ ಬೇಸರ, ಅಸಮಾಧಾನ, ಆಕ್ರೋಶದ ಜೊತೆಗೆ ಚುನಾವಣೆ ಸರಾಗವಾಗಿ ನೆಡೆದು ಫಲಿತಾಂಶ ಹೊರಬಿದ್ದಿದೆ.
ಕಳೆದ ಹಾಗೂ ಅದಕ್ಕೂ ಹಿಂದಿನ ಬಾರಿಯ ಪರಾಜಿತ ಅಭ್ಯರ್ಥಿ ಎಂ.ಪ್ರಕಾಶ ಮೂರ್ತಿ ಈ ಬಾರಿ ಅನಾಯಾಸ ಗೆಲವನ್ನು ದಕ್ಕಿಸಿಕೊಂಡರು. ಎಂ. ತಿಮ್ಮಯ್ಯ ಹಾಗೂ ಎಂ. ಪ್ರಕಾಶ ಮೂರ್ತಿ ನೇರ ಹಣಾಹಣಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಒಟ್ಟು 10,538 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಎರಡು ಬಾರಿ ಇದ್ದ ಎಂ. ತಿಮ್ಮಯ್ಯ ಮೂರನೇ ಬಾರಿ ಸೋಲುವಂತಾಯಿತು. ಇದು ತನ್ನ ಕೊನೆಯ ಸೆಣಸಾಟ ಎಂದಿದ್ದರು.