ಕೌನ್‌ ಬನೇಗಾ ಕರೋಡ್ ಪತಿ ಲಾಟರಿ ಹೆಸರಿನಲ್ಲಿ ಮಹಿಳೆಗೆ ಭಾರೀ ವಂಚನೆ

ಭಾನುವಾರ, 3 ನವೆಂಬರ್ 2019 (18:45 IST)
25 ಲಕ್ಷ ರೂ. ಮೊತ್ತದ ಲಾಟರಿ ಸಿಕ್ಕಿದೆ ಎಂದು ಮಹಿಳೆಯೊಬ್ಬರಿಗೆ ವಾಟ್ಸಾಪ್‌ ಕಾಲ್‌ ಮೂಲಕ ಹೇಳಿ ಮೋಸ ಮಾಡಿರೋ ಘಟನೆ ನಡೆದಿದೆ.

ನಾನಾ ಶುಲ್ಕ ಎಂದು ನಂಬಿಸಿ 5.99 ಲಕ್ಷ ರೂ. ಪಡೆದು ಮಹಿಳೆಯೊಬ್ಬರಿಗೆ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕುಲಕರ್ಣಿ ಹಕ್ಕಲ ನಿವಾಸಿ ಯಶೋಧಾ ರಾಜಾರಾಂ ಶಿಂಧೆ ಹಣ ಕಳೆದುಕೊಂಡವರು.

ವಾಟ್ಸಾಪ್‌ ಕಾಲ್‌ ಮಾಡಿ ಕೌನ್‌ ಬನೇಗಾ ಕರೋಡ್ ಪತಿ ಮುಂಬಯಿನಿಂದ ಮಾತನಾಡುವುದಾಗಿ ಹೇಳಿದ ಖದೀಮರು, ನಿಮಗೆ 25 ಲಕ್ಷ ರೂ. ಲಾಟರಿ ಸಿಕ್ಕಿದೆ. ಹೆಚ್ಚಿನ ಮಾಹಿತಿಗೆ ಕರೆ ಮಾಡುವಂತೆ ತಿಳಿಸಿ ಮೊಬೈಲ್‌ ನಂಬರ್‌ ಕೊಟ್ಟಿದ್ದಾರೆ. ಇದನ್ನು ನಂಬಿದ ಯಶೋಧಾ ಮತ್ತು ಅವರ ಮಗಳು ಮರಳಿ ವಾಟ್ಸಾಪ್‌ ಕಾಲ್‌ ಮಾಡಿದ್ದಾರೆ. ಆಗ ಮತ್ತೊಬ್ಬ ಖದೀಮ, ತಾನು ಅಕೌಂಟ್‌ ಆಫೀಸರ್‌ ಇದ್ದು, ಇನ್ಸೂರನ್ಸ್‌ ಪಾಲಸಿ ಬಾಂಡ್‌, ಬಾಂಡ್‌ ಪೇಪರ್‌ ಮತ್ತು ಗುರುತಿನ ಕಾರ್ಡ್‌ ಆಧಾರ್‌ ಕಾರ್ಡ್‌ಗಳನ್ನು ಯಶೋಧ ಅವರ ನಂಬರ್‌ಗೆ ವಾಪಸ್‌ ಕಳಿಸಿದ್ದಾನೆ.

ಇದನ್ನು ನಂಬಿದ ಯಶೋಧಾ ಅವರು ಜಿಎಸ್‌ಟಿ, ಇನ್ಸೂರನ್ಸ್‌, ದಾಖಲೆ ನಿರ್ವಹಣೆ ಶುಲ್ಕ ಹಾಗೂ ಇತರೆ ಶುಲ್ಕ ಎಂದು ತಿಳಿಸಿ ಬೇರೆ ಬೇರೆ ಖಾತೆಗಳಿಗೆ 5,99,500 ರೂ.ಗಳನ್ನು ಜಮಾ ಮಾಡಿಸಿಕೊಂಡಿದ್ದಾರೆ. ಹಲವು ದಿನಗಳು ಕಳೆದರೂ ಲಾಟರಿ ಹಣ ಮತ್ತು ಪಾವತಿಸಿದ ಹಣ ಮರಳಿ ಸಿಗದಿದ್ದಾಗ ಇದು ಮೋಸ ಎಂದು ತಿಳಿದು ಯಶೋಧ ಅವರು ಸೈಬರ್‌ ಕ್ರೈಂ ಗೆ ದೂರು ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ