ಕಾವೇರಿ ಗಲಭೆಯಲ್ಲಿ ಆರೆಸ್ಸೆಸ್ ಕೈವಾಡ: ಪರಮೇಶ್ವರ್ ಬೆಂಬಲಿಸಿದ ರಾಯರೆಡ್ಡಿ

ಶನಿವಾರ, 17 ಸೆಪ್ಟಂಬರ್ 2016 (12:29 IST)
ಕಾವೇರಿ ಗಲಭೆಯ ಹಿಂದೆ ಆರೆಸ್ಸೆಸ್ ಪಾತ್ರ ಇದೆ ಎಂದು ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದೆ. ಗೃಹ ಸಚಿವರು ಸುಖಾ ಸುಮ್ಮನೆ ಹೇಳಿಕೆ ನೀಡುವುದಿಲ್ಲ ಎಂದು ಸಚಿವ ಬಸವರಾಜ್ ರಾಯರೆಡ್ಡಿ ಅವರು ಡಾ.ಜಿ.ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
 
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಗಲಭೆಯ ಹಿಂದೆ ಆರೆಸ್ಸೆಸ್ ಸಂಘಟನೆಯ ಕೈವಾಡವಿರುವ ಕುರಿತು  ಡಾ.ಜಿ.ಪರಮೇಶ್ವರ್ ಅವರು ಸುಳ್ಳು ಹೇಳಿಕೆ ನೀಡಲು ಸಾಧ್ಯವಿಲ್ಲ. ಅವರ ಬಳಿ ಸಾಕ್ಷಾಧಾರಗಳಿರಬಹುದು ಎಂದರು.
 
ಕಾವೇರಿ ವಿವಾದವನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಸಚಿವ ಬಸವರಾಜ್ ರಾಯರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ. 
 
ಕಾವೇರಿ ಗಲಭೆಗೆ ಆರೆಸ್ಸೆಸ್ ಕಾರಣ. ಈ ಕುರಿತು ತನಿಖೆ ನಡೆಸಿ ಸತ್ಯಾಸತ್ಯಗೆಗಳನ್ನು ಬಯಲಿಗೆಳೆಯಬೇಕು. ಇಲ್ಲದಿದ್ದರೇ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ