ಸಿಎಂ ಗ್ರಾಮವಾಸ್ತವ್ಯದಿಂದ ಮೂರು ಕಾಸಿನ ಪ್ರಯೊಜನವಿಲ್ಲ-ಕೈ ಮುಖಂಡ ಕೆ.ಬಿ.ಚಂದ್ರಶೇಖರ್ ಕಿಡಿ
ಮಂಗಳವಾರ, 11 ಜೂನ್ 2019 (11:38 IST)
ಬೆಂಗಳೂರು : ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೈ ಮುಖಂಡ ಕೆ.ಬಿ.ಚಂದ್ರಶೇಖರ್ ಕಿಡಿಕಾರಿದ್ದಾರೆ.
ಈ ಹಿಂದೆ ನಮ್ಮ ತಾಲೂಕಿನಲ್ಲೂ ಗ್ರಾಮವಾಸ್ತವ್ಯ ಮಾಡಿದ್ದರು, ಹೆಚ್.ಡಿ.ಕೆ. ವಾಸ್ತವ್ಯ ಮಾಡಿದ್ದ ಗ್ರಾಮಗಳ ಪರಿಸ್ಥಿತಿ ಏನಾಗಿದೆ? ಆದ್ದರಿಂದ ಕೆಲಸಕ್ಕೆ ಬಾರದ ಗ್ರಾಮವಾಸ್ತವ್ಯವನ್ನು ಬಿಟ್ಟು ಕೆಲಸ ಮಾಡಲಿ ಎಂದು ಸಿಎಂಗೆ ಕೆ.ಬಿ.ಚಂದ್ರಶೇಖರ್ ಸಲಹೆ ನೀಡಿದ್ದಾರೆ.
ಗ್ರಾಮವಾಸ್ತವ್ಯದ ವೇಳೆ ಆ ಭಾಗದ ಜೆಡಿಎಸ್ ಮುಖಂಡರು ತುಂಬಿಕೊಳ್ತಾರಷ್ಟೇ. ಇದರಿಂದ ಮೂರು ಕಾಸಿನ ಪ್ರಯೊಜನವಾಗಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಮಂಡ್ಯ ಜಿಲ್ಲೆಗೆ 5 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ ಅಂತಾರೆ. ಅದನ್ನ ಯಾವ ಬಜೆಟ್ ನಲ್ಲಿ ತೋರಿಸಿದ್ದೀರಿ. ಮಂಡ್ಯ ಜನರನ್ನ ಮೂರ್ಖರು ಅಂದುಕೊಂಡಿದ್ದೀರಾ? ಸಿಎಂಯನ್ನು ಪ್ರಶ್ನಿಸಿದ್ದಾರೆ.