ಆಸ್ಪತ್ರೆಗೆ ಮಕ್ಕಳ ದೌಡು

ಭಾನುವಾರ, 3 ಜುಲೈ 2022 (20:14 IST)
ರಾಜಧಾನಿಯ ಮಕ್ಕಳಲ್ಲಿ ಕಳೆದ ಒಂದೆರಡು ವಾರಗಳಿ೦ದ ಜ್ವರ, ಶೀತ, ಕೆಮ್ಮು, ಕಫ ಸಮಸ್ಯೆಗಳು ಹೆಚ್ಚಳವಾಗಿದೆ. ಹವಾಮಾನ ಬದಲಾವಣೆಯಿಂದ ಬಂದಿರುವಸಾಮಾನ್ಯ ವೈರಲ್ಪ್ಯೂಕಾಯಿಲೆಯೋ ಅಥವಾ ಕೊರೋನಾ ವೈರಸ್ ದಾಳಿಯೋ, ಡೆಂಘೀ ಕಾಟವೊ ಎಂಬ ಆತಂಕ ಪೋಷಕರಲ್ಲಿ ಮೂಡಿದೆ. ನಗರದ ವಿಕ್ಟೋರಿಯಾ, ಜಯನಗರ ಜನರಲ್ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆ ಸೇರಿದಂತೆ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಕಳೆದ ಒಂದು ವಾರದಿಂದ ಹೊರರೋಗಿಗಳಾಗಿ ಚಿಕಿತ ಪಡೆಯುವವರ ಸಂಖ್ಯೆ ಶೇ.15-20ರಷ್ಟು 2 ಹೆಚ್ಚಾಗಿದೆ. ಈ ಪೈಕಿ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ. ಈ ಕುರಿತು ಕೆಸಿ ಜನರಲ್ ಆಸ್ಪತ್ರೆಯ ಮಕ್ಕಳ ಆರೋಗ್ಯ ತಜ್ಞ ರಘುನಂದನ್ ಮಾಹಿತಿಯನ್ನು ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ