ಶಬರಿಮಲೆಗೆ ಹೋಗಲು ವಿಮಾನ ಸೇವೆ

ಗುರುವಾರ, 16 ಫೆಬ್ರವರಿ 2017 (06:48 IST)
ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳ ಶಬರಿ ಮಲೆಯಲ್ಲಿ ಹಸಿರು ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವಕ್ಕೆ ಕೇರಳ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ.
 
ಈ ಪ್ರಸ್ತಾವಿತ ವಿಮಾನ ನಿಲ್ದಾಣದ ನಿರ್ಮಾಣ ಕುರಿತಾದ ಅಧ್ಯಯನವನ್ನು ಕೈಗೊಳ್ಳಲು ಕೇರಳ ಸರ್ಕಾರ ಕೈಗಾರಿಕಾಭಿವೃದ್ಧಿ ನಿಗಮವನ್ನು ಸಚಿವ ಸಂಪುಟ ಕೋರಿದೆ.
ಮಣಿಕಂಠನ ಸನ್ನಿಧಾನಕ್ಕೆ ಹೋಗುವ ಭಕ್ತರ ಸಂಖ್ಯೆ ವರ್ಷ ವರ್ಷ ಏರುತ್ತಲೇ ಇದ್ದು ಸಂಚಾರ ವ್ಯವಸ್ಥೆಗೆ ಆಗುತ್ತಿರುವ ಅಡಚಣೆ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇಲ್ಲಿಯವರೆಗೆ ಭಕ್ತರು ಕೇವಲ ರಸ್ತೆಮಾರ್ಗವಾಗಿ ಶಬರಿಮಲೆಗೆ ಹೋಗಬಹುದಾಗಿದೆ.ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಈ ಹಿಂದೆ ದೇವಸ್ಥಾನದಿಂದ 45ಕೀಲೋಮೀಟರ್ ದೂರದಲ್ಲಿರುವ ಎರುಮಲೆ ಸಮೀಪದ ತಾಣವನ್ನು ಪ್ರಸ್ತಾವಿತ ವಿಮಾನ ನಿಲ್ದಾಣಕ್ಕಾಗಿ ಗುರುತಿಸಿತ್ತು. 
 
ಶಬರಿ ಮಲೆಗೆ ರೈಲ್ವೆ ಮಾರ್ಗವನ್ನು ನಿರ್ಮಿಸುವ ಯೋಜನೆ ಹಣಕಾಸಿನ ಕೊರತೆ ಮತ್ತು ಕೇಂದ್ರ ಸರ್ಕಾರದಿಂದ ಅನುಪತಿ ಪಡೆಯಲು ವಿಳಂವಾದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿದೆ.

ವೆಬ್ದುನಿಯಾವನ್ನು ಓದಿ