‘ಕೆಜಿಎಫ್-2’ ಸಿನಿಮಾದ ಹೊಸ ಹಾಡು ರಿಲೀಸ್

ಬುಧವಾರ, 6 ಏಪ್ರಿಲ್ 2022 (19:26 IST)
ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇದೇ ತಿಂಗಳ 14ನೇ ತಾರೀಖಿನಂದು ಬಿಡುಗಡೆ ಆಗಲಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಭಾರತಾದ್ಯಂತ ಧೂಳೆಬ್ಬಿಸಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಜೊತೆಗೆ ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಸಂಗೀತ ನೀಡಿದ 'ತೂಫಾನ್..' ಹಾಡು ಸೂಪರ್ ಹಿಟ್ ಆಗಿದೆ. ಈಗ ಮತ್ತೊಂದು ಹಾಡಿನ ಮೂಲಕ ಜನಮನ ಸೆಳೆಯುತ್ತಿದೆ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ತಂಡ. 'ಕೆಜಿಎಫ್: ಅಧ್ಯಾಯ 1' ಚಿತ್ರದಲ್ಲಿ ಗೊತ್ತಾಗಿರುವಂತೆ ಈ ಕಥೆಯಲ್ಲಿ ಮದರ್ ಸೆಂಟಿಮೆಂಟ್ ಕೂಡ ಇದೆ. 'ಗರ್ಭದಿ ನನ್ನಿರಿಸಿ..' ಹಾಡು ಮಾಡಿದ ಮೋದಿ ಅಷ್ಟಿಷ್ಟಲ್ಲ. ಈಗ 'ಗಗನ ನೀ..' ಗೀತೆಯನ್ನು ರಿಲೀಸ್ ಮಾಡಲಾಗಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಗಮನ ಸೆಳೆಯುತ್ತಿದೆ. ತಾಯಿ ಸೆಂಟಿಮೆಂಟ್ ಸಾಂಗ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಗ್ಗೆ ಇರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ