ರೌಡಿ ಶೀಟರ್‌ಗಳಿಗೆ ಖಡಕ್ ವಾರ್ನಿಂಗ್

ಸೋಮವಾರ, 1 ಅಕ್ಟೋಬರ್ 2018 (18:23 IST)
ಬೆಂಗಳೂರು ನಗರ ಪೊಲೀಸರು ಇತ್ತೀಚೆಗೆ ನಗರದ ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ಮೂಲಕ ಎಚ್ಚರಿಕೆಯನ್ನ ನೀಡಿದ್ದರು. ಇದರಿಂದ ಎಚ್ಚೆತ್ತ ಬೆಂಗಳೂರು ಹೊರವಲಯ ನೆಲಮಂಗಲ ವ್ಯಾಪ್ತಿಯ ಪೊಲೀಸರು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ರೌಡಿ ಪರೇಡ್ ಮಾಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಎಸ್ ಪಿ ಖಡಕ್ ವಾರ್ನಿಂಗ್ ಗೆ ಹೆದರಿದ ಪ್ರತಿಯೋರ್ವ ರೌಡಿಶೀಟರ್ ಗಳು ಭಾಗಿಯಾಗಿದ್ದರು.

ಒಟ್ಟು 166 ಜನ ರೌಡಿ ಶೀಟರ್ಸ್‌ಗೆ ಖಡಕ್ ಎಚ್ಚರಿಕೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದ್ದಾರೆ. ಹಿಂದಿನ ನೆಲಮಂಗಲ ಆಗದಂತೆ ಹಾಗೂ ಚಾಲ್ತಿಯಲ್ಲಿರುವ ರೌಡಿಶೀಟರ್ ಗಳು ಮತ್ತೆ ಜನರಿಗೆ ದಮ್ಕಿ ಹಾಕಿ ಹಪ್ತ ವಸೂಲಿ,  ರಿಯಲ್ ಎಸ್ಟೇಟ್ ದಂಧೆ ಇನ್ನಿತರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಖಡಕ್ ವಾರ್ನಿಂಗ್ ನೀಡಿ ಬೆವರಿಳಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ