ಮನೆಯಲ್ಲಿ ಡ್ರಗ್ಸ್‌ ಇಟ್ಟ ಖದೀಮ

geetha

ಮಂಗಳವಾರ, 20 ಫೆಬ್ರವರಿ 2024 (17:03 IST)
ಬೆಂಗಳೂರು- ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬ ಅಮಾಯಕನೊಬ್ಬನ ಮನೆಯಲ್ಲಿ ಡ್ರಗ್ಸ್‌ ಇರಿಸಿ ಪೊಲೀಸರಿಗೆ ದೂರು ನೀಡಿ ಆತ ಜೈಲು ಸೇರುವಂತೆ ಮಾಡಿರುವ ಘಟನೆಯೊಂದು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ ಚೋಗುರಾಮ್‌ ಎಂಬಾತ ಅಮಾಯಕ ಯುವಕನಾಗಿದ್ದು, ಈತನನ್ನುಜೈಲು ಸೇರುವಂತೆ ಮಾಡಿರುವ ಖದೀಮ ಸೋನುರಾಮ್‌ ಎಂಬ ವ್ಯಕ್ತಿ ಪರಾರಿಯಾಗಿದ್ದಾನೆ.

ಈ ಹಿಂದೆ ಸೋನುರಾಮ್‌ ಹಣಕ್ಕಾಗಿ ಚೋಗುರಾಮ್ ಮಗನನ್ನು ಅಪಹರಿಸಿದ್ದ. ಬಳಿಕ ಪೊಲೀಸರು ಸುರಕ್ಷಿತವಾಗಿ ಸೋನುರಾಮ್‌ ಮಗನನ್ನು ರಕ್ಷಿಸಿದ್ದರು. ಬಳಿಕ ತನ್ನ ಸಹಚರರ ಮೂಲಕ 200 ಗ್ರಾಂ ಅಫೀಮ್‌ ಮಾದಕ ವಸ್ತುವನ್ನು ಚೋಗುರಾಮ್‌ ಮನೆಯಲ್ಲಿ ಇರಿಸಿದ್ದ ಸೋನುರಾಮ್‌ ಬಳಿಕ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಪ್ರಕರಣದಲ್ಲಿ ಅಮಾಯಕನಾಗಿದ್ದ ಚೋಗುರಾಮ್‌ ಜೈಲು ಸೇರಿದ್ದ. ಆದರೆ ಮನೆಯ ಬಳಿಯಿರುವ ಸಿಸಿಟಿವಿ ಕೆಮರಾದಲ್ಲಿ ಸೋನುರಾಮ್‌ ಸಹಚರರು ಡ್ರಗ್ಸ್‌ ತಂದಿಡುತ್ತಿರುವುದು ದಾಖಲಾಗಿತ್ತು. ಸಧ್ಯಕ್ಕೆ ಚೋಗುರಾಮ್‌ ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಸೋನುರಾಮ್‌ ಗಾಗಿ ಹುಡುಕಾಟ ನಡೆದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ