ಬೆಂಗಳೂರು :ಬೆಂಗಳೂರು ಸಂಚಾರ ಪೊಲೀಸ್ ಡಿಸಿಪಿ ಶಿವಪ್ರಕಾಶ್ ದೇವರಾಜ್ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಫೇಕ್ ಲಿಂಕ್ ಗಳ ಹಾವಳಿಯಿಂದಾಗಿ ಹಲವು ಮಂದಿ ಹಣ ಕಳೆದುಕೊಂಡಿದ್ದಾರೆ. ಗ್ರಾಹಕರು ಹಣ ಪಾವತಿಸುವಾಗ ನಿಗಾ ವಹಿಸಬೇಕು. ಒಂದು ವೇಳೆ ವಂಚನೆ ಕಂಡು ಬಂದಲ್ಲಿ ಕೂಡಲೇ ಸೈಬರ್ ವಿಭಾಗದ ಪೊಲೀಸರಿಗೆ ದೂರು ನೀಡಬೇಕೆಂದು ಪೊಲೀಸ್ ಇಲಾಖೆ ಸೂಚಿಸಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಬಯಸುವ ವಾಹನ ಸವಾರರು ನಕಲಿ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ನಕಲಿ ಲಿಂಕ್ ಗಳು ಹರಿದಾಡುತ್ತಿದ್ದು, ಅಧಿಕೃತ ಸರ್ಕಾರಿ ವೈಬ್ ಸೈಟ್ ಗೆ ಮಾತ್ರ ಗ್ರಾಹಕರು ಹಣ ಪಾವತಿಸಬೇಕು ಎಂದು ಪೊಲೀಸ್ ಇಲಾಖೆ ಹೇಳಿದೆ.