ಶಾಸಕರ ಮನೆ ಟಾರ್ಗೆಟ್ ಮಾಡಿಕೊಂಡು ಪದೇ ಪದೇ ಕಳ್ಳತನ ಮಾಡ್ತಿರೋರು ಯಾರು?
ಮಂಗಳವಾರ, 12 ನವೆಂಬರ್ 2019 (13:27 IST)
ಕಳೆದ ವರ್ಷ ಕಳ್ಳತನ ಮಾಡಲಾಗಿದ್ದ ಶಾಸಕರ ಮನೆಗೆ ಮತ್ತೆ ಕಳ್ಳರು ಕನ್ನ ಹಾಕಿದ್ದಾರೆ.
ಚಿತ್ರದುರ್ಗದ ಕೂಡ್ಲಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮನೆಗೆ ಕಳ್ಳರು ಕನ್ನ ಹಾಕಿ ವಿಫಲರಾಗಿದ್ದಾರೆ.
ನಗರದ ಧವಳಗಿರಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಎರಡನೇ ಬಾರಿಗೆ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಕಳೆದ ವರ್ಷವೂ ಮನೆ ಬಾಗಿಲು ಮುರಿದ ಬೆಳ್ಳಿ ದೀಪ, 2 ಸಾವಿರ ಹಣ ಕದ್ದಿದ್ದರು. ರಾತ್ರಿ ಮತ್ತೆ ಬಾಗಿಲು ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದ್ದು, ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.