ಆಕ್ಸಿಡೆಂಟ್ ರೇಟ್ ಕುಗ್ಗಿಸಲು ಖಾಕಿ ಪಡೆ ಅಲರ್ಟ್

ಶುಕ್ರವಾರ, 15 ಡಿಸೆಂಬರ್ 2023 (14:41 IST)
ರಾಜಧಾನಿಯಲ್ಲಿ ಬಿಎಂಟಿಸಿ ಬಸ್ ಗಳಿಂದ  ಸಾಲು ಸಾಲು ಸಾವುಗಳು ಸಂಭವಿಸಿದೆ.ಇದಕ್ಕೆಲ್ಲ ಬಿಎಂಟಿಸಿ ಬಸ್ ಗಳು ಕಾರಣವಾಗ್ತಿದೆ.ಬೆಂಗಳೂರಿನಲ್ಲಿ ಕಂಟ್ರೋಲ್ ಗೆ ಬಾರದ BMTC ಆಕ್ಸಿಡೆಂಟ್ ರೇಟ್ ಹೆಚ್ಚಾಗ್ತಿದೆ ಹೀಗಾಗಿ ಆತಂಕಕ್ಕೆ  ಪೊಲೀಸ್ ಇಲಾಖೆ ಒಳಗಾಗಿದೆ.ಆಕ್ಸಿಡೆಂಟ್ ರೇಟ್ ಕುಗ್ಗಿಸಲು ಖಾಕಿ ಪಡೆ ಅಲರ್ಟ್ ಆಗಿದೆ.ಕಿಲ್ಲರ್ ಬಿಎಂಟಿಸಿಗೆ ಸಂಚಾರಿ ಪೊಲೀಸರಿಂದ ಎಚ್ಚರಿಕೆ ನೀಡಲಾಗಿದೆ.
 
ಇನ್ಮೇಲೆ ಡ್ರೈವರ್ ಗಳಿಗೆ ಡ್ರೈವಿಂಗ್ ಸ್ಕಿಲ್ಸ್ ಟ್ರೈನಿಂಗ್ ನೀಡಲಾಗುತ್ತೆ.ಖುದ್ದು BMTC ಡ್ರೈವರ್ ಗಳಿಗೆ ಟ್ರಾಫಿಕ್ ಪೊಲೀಸ್ ಸ್ಟೆಷಲ್ ಟ್ರೈನಿಂಗ್ ನೀಡಲಾಗ್ತಿದೆ.ಮಾರಣಾಂತಿಕ ಅಪಘಾತ ತಡೆಯಲು ಟ್ರಾಫಿಕ್ ಪೊಲೀಸರಿಂದ ತರಬೇತಿ ನೀಡಲಾಗ್ತಿದ್ದು,ಜನವರಿಯಿಂದ ನವೆಂಬರ್  ನಲ್ಲಿ 34 ಮಂದಿ ಬಿಎಂಟಿಸಿಗೆ ಸಾವನಾಪ್ಪಿದ್ದಾರೆ ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಚಾಲಕರ ನಿರ್ಲಕ್ಷ್ಯವೇ ಕಾರಣವಾಗಿದೆ.
 
ಈಗಾಗಲೇ ಕೆಲ ಡ್ರೈವರ್ ಗಳಿಗೆ ಬಿಎಂಟಿಸಿ ತರಬೇತಿ ನೀಡ್ತಿದೆ.ಆದ್ರೆ ತರಬೇತಿ ಕೊಟ್ಟರು  ಚಾಲಕರು ನಿರ್ಲಕ್ಷ್ಯವಹಿಸಿದ್ದಾರೆ.ಕಮಾಂಡ್ ಸೆಂಟರ್ ನಲ್ಲಿ ನಿತ್ಯ 50 ಚಾಲಕರಿಗೆ ತರಬೇತಿ ನೀಡ್ತಿದ್ದು,ಹಂತ ಹಂತವಾಗಿ ಎಲ್ಲಾ ಚಾಲಕರಿಗೆ ತರಬೇತಿ ನೀಡಲಾಗ್ತಿದೆ.ಬೆಂಗಳೂರು ನಗರದ ಟ್ರಾಫಿಕ್ ನಲ್ಲಿ ಹೇಗೆಲ್ಲಾ ಬಸ್ ಓಡಿಸಬೇಕು,ಸಿಗ್ನಲ್ ಹೇಗೆ ಡ್ರೈವಿಂಗ್ ಮಾಡಬೇಕು.

ಸಂಚಾರ ನಿಯಮಗಳ ಬಗ್ಗೆ ಪಾಠ ನಗರದಲ್ಲಿ ಬಿಎಂಟಿಸಿ ಆಕ್ಸಿಡೆಂಟ್ ರೇಟ್ ಇಳಿಸಲು ಚಾಲಕರಿಗೆ ಶಾಂತಿ ಪಾಠ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.ಈಗಾಗಲೇ ಪೊಲೀಸ್ ಇಲಾಖೆ ಜೊತೆ ಬಿಎಂಟಿಸಿ ಮಾತುಕತೆ ನಡೆಸಿದ್ದು, ಸಂಚಾರಿ ಪೊಲೀಸ್ ಇಲಾಖೆ ಡ್ರೈವರ್ ಗಳಿಗೆ ತರಬೇತಿ ನೀಡಲು ಅನುಮತಿ ನೀಡಿದೆ ಎಂದು ಬಿಎಂಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ