ಖರ್ಗೆ ಅಳಿಯ ರಾಧಾಕೃಷ್ಣ ಲೋಕಸಭೆಗೆ ಸ್ಪರ್ಧೆ-ಚಿಂಚನಸೂರು
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಕಾಂಗ್ರೆಸ್ ಹೈಕಮಾಂಡ್ ಇಂತಹ ದಾಳ ಉರುಳಿಸಬಹುದೇ ಎಂಬ ಬಗ್ಗೆ ಗುರುಮಠಕಲ್‌ನಲ್ಲಿ ಬಾಬುರಾವ್ ನೀಡಿರುವ ಈ ಹೇಳಿಕೆ ಅಚ್ಚರಿ ಮೂಡಿಸಿದೆ.ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಯಾರನ್ನು ನಿಲ್ಲಿಸುತ್ತಾರೋ ಗೊತ್ತಿಲ್ಲ ಎಂದ ಚಿಂಚನಸೂರು, ತಮಗೆ ಇರುವ ಮಾಹಿತಿಯಿಂತೆ ರಾಧಾಕೃಷ್ಣ ಅವರನ್ನು ನಿಲ್ಲಿಸಬಹುದು ಎಂದಿದ್ದಾರೆ.