ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಹಾಲು ತರಲು ಹೋಗಬೇಕಲ್ಲಾ ಎಂದು ಸೋಮಾರಿತನ ಮಾಡುವವರ ನೆರವಿಗೆ ಕೆಎಂಎಫ್ ಬಂದಿದೆ. ಆನ್ ಲೈನ್ ಮೂಲಕ ಹಾಲು ಖರೀದಿಸಲು ವ್ಯವಸ್ಥೆ ಮಾಡಿದೆ.
ಆನ್ ಲೈನ್ ಮೂಲಕ ನಂದಿನಿ ಹಾಲು ಖರೀದಿಸಲು ಇಡೈರಿ ಎಂಬ ಆನ್ ಲೈನ್ ವ್ಯವಸ್ಥೆಯನ್ನು ತೆರೆದಿದೆ. ಶುಕ್ರವಾರ ಆನ್ ಲೈನ್ ಪೋರ್ಟಲ್ ನನ್ನು ಲೋಕಾರ್ಪಣೆಗೊಳಿಸಲಾಗಿದೆ.
ಆದರೆ ಈ ಸೇವೆ ಬೆಳಿಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಲಭ್ಯವಿರಲಿದೆ. ಅಲ್ಲದೆ, 250 ರೂ. ಗಿಂತ ಮೇಲ್ಪಟ್ಟ ಖರೀದಿಗೆ ಮಾತ್ರ ಆನ್ ಲೈನ್ ಸೇವೆ ಬಳಸಬಹುದಾಗಿದೆ.
ನಂದಿನಿ ಕೇಂದ್ರದಿಂದ ನಾಲ್ಕು ಕಿ.ಮೀ. ದೂರದವರೆಗಿನ ಪ್ರದೇಶಗಳಿಗೆ ಹೋಮ್ ಡೆಲಿವರಿ ಮಾಡಲಾಗುವುದು. ಎಸ್ ಎಂಎಸ್ ಮೂಲಕ ಗ್ರಾಹಕರಿಗೆ ಡೆಲಿವರಿ ಮಾಹಿತಿ ಒದಗಿಸಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ