ಧಾರವಾಡ : ಕ್ಷುಲ್ಲಕ ಕಾರಣಕ್ಕಾಗಿ ಯುವಕನ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಅಯಾನ್ ನದಾಫ್ ಎಂಬುವವನ ಮೇಲೆಯೇ ಯುವಕರ ಗುಂಪು ಚಾಕುವಿನಿಂದ ದಾಳಿ ನಡೆಸಿದೆ. ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಸವರಾಜ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಅಯಾನ್ ಆರೋಪಿಸಿದ್ದಾನೆ.
ಧಾರವಾಡದ ಜೆಎಸ್ಎಸ್ ಕಾಲೇಜು ಬಳಿ ಈ ಘಟನೆ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕಾಗಿ ಅಯಾನ್ ಎಂಬ ಯುವಕನೊಂದಿಗೆ ಜಗಳ ತೆಗೆದ ಯುವಕರ ಗುಂಪು ಅಯಾನ್ ಎದೆಗೆ ಎರಡು ಬಾರಿ ಹಾಗೂ ಬೆನ್ನಿಗೆ ಒಂದು ಬಾರಿ ಚಾಕುವಿನಿಂದ ದಾಳಿ ನಡೆಸಿದೆ.
ಸದ್ಯ ಗಾಯಗೊಂಡಿರುವ ಅಯಾನ್ಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದಾಳಿ ಮಾಡಿದವರ ಬಂಧನಕ್ಕೆ ಬಲೆ ಬಿಸಿದ್ದಾರೆ.