ಕೊಡಗು-ಕೇರಳ ಪ್ರವಾಹ: ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಬುಧವಾರ, 22 ಆಗಸ್ಟ್ 2018 (15:55 IST)
ಕೇರಳ ಮತ್ತು ಕೊಡಗಿನಲ್ಲಿ ಆಗಿರುವ ಸಂಕಷ್ಟಗಳ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕ. ಬಕ್ರೀದ್ ಹಬ್ಬವನ್ನು ಎಲ್ಲೆಡೆ ಮುಸ್ಲಿಂ ಬಾಂಧವರು ಆಚರಿಸುತ್ತಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ  ಎಲ್ಲಾ ಮುಸ್ಲಿಂ ಬಾಂಧವರು ತಮ್ಮ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಅಂದುಕೊಂಡಿದ್ದರು.  ಆದರೆ ಕೊಡಗು, ಮಡಿಕೇರಿ ಮತ್ತು ಕೇರಳ ಸುತ್ತಮುತ್ತಲಿನ ಕಡೆ ಮಳೆಯಿಂದ ಅಲ್ಲಿನ ಜನ ಪ್ರತಿನಿತ್ಯ ತೊಂದರೆ ಪಡುತ್ತಿದ್ದಾರೆ. ಆದ್ದರಿಂದ ಆನೇಕಲ್ ಪಟ್ಟಣದ ಮುಸ್ಲಿಂ ಬಾಂಧವರು ವಿಶೇಷವಾದ ಬಕ್ರೀದ್ ಹಬ್ಬವನ್ನು ಸರಳಲವಾಗಿ ಆಚರಣೆ ಮಾಡಲು ತೀರ್ಮಾನಿಸಿದರು. 

ಇನ್ನು ಕೊಡಗು ಮಡಿಕೇರಿ ಹಾಗೆ ಕೇರಳದಲ್ಲಿ ಬೀಳುತ್ತಿರುವ ಮಳೆ ಕಡಿಮೆಯಾಗಿ ಅಲ್ಲಿ ಸಂಕಷ್ಟದಲ್ಲಿರುವ ಜನರು ಮತ್ತೆ ಮೊದಲಿನಂತೆ ಅವರ ಜೀವನ ಆಗಬೇಕು ಎಂದು ಎಲ್ಲಾ  ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಸರಳವಾಗಿ ಬಕ್ರೀದ್ ಹಬ್ಬವನ್ನು  ಆಚರಿಸಿ ಗಮನ ಸೆಳೆದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ