15ನೇ ದಿನಕ್ಕೆ ಕಾಲಿಟ್ಟ ಕಾರಂಜಾ ಸಂತ್ರಸ್ಥರ ಧರಣಿ

ಬುಧವಾರ, 22 ಆಗಸ್ಟ್ 2018 (15:02 IST)
ಚಳಿ… ಮಳೆ.. ಎನ್ನದೇ ಹಗಲು, ರಾತ್ರಿ ಎನ್ನದೇ ಸತ್ಯಾಗ್ರಹವನ್ನು ಕಾರಂಜ ಸಂತ್ರಸ್ತರು ಮುಂದುವರಿಸಿದ್ದಾರೆ.
ಕಾರಂಜಾ ಸಂತ್ರಸ್ಥರ ಧರಣಿ 15ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಇಲ್ಲಿಯವರೆಗೂ ಯಾವ ರಾಜಕಾರಣಿ ಯಾಗಲಿ ಧರಣಿ ನಿರತರ ಸ್ಥಳಕ್ಕೆ ಭೇಟಿ ನೀಡಿಲ್ಲ.

ಜಾತಿ, ಧರ್ಮ ಮರೆತು ಎಲ್ಲಾ ಸಮುದಾಯದ ಜನರು ಸೇರಿ ಭಜನೆ ಮಾಡುತ್ತಾ ಸತ್ಯಾಗ್ರಹ ಮುಂದುವರಿಸಿದ್ದಾರೆ.  
ದೇವರ ಮೇಲೆ ನಂಬಿಕೆಯಿಟ್ಟು ಸಂತ್ರಸ್ತರು ಪ್ರತಿಭಟನೆ ಮುಂದುವರಿಸಿದ್ದಾರೆ. ಹದಿನಾಲ್ಕು ದಿನ ಪೂರೈಸಿ 15ನೇ ದಿನಕ್ಕೆ  ಕಾರಂಜಾ ಸಂತ್ರಸ್ತರ ಸತ್ಯಾಗ್ರಹ ಕಾಲಿಟ್ಟಿದೆ.

ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೀದರ್ ಜಿಲ್ಲಾಧಿಕಾರಿ ಕಾರ್ಯಾಲಯ ಮುಂದೆ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಕಾರಂಜಾ ಯೋಜನೆಯಲ್ಲಿ ಹೊಲ, ಮನೆ, ಕಳೆದುಕೊಂಡು ಅನಾಥರಾದ ಸಂತ್ರಸ್ತರು ತಮ್ಮ ನೈತಿಕ ಹಕ್ಕಿಗಾಗಿ ಹೋರಾಟಕ್ಕೆ ಇಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ