ಮೈತ್ರಿ ಸರಕಾರಕ್ಕೆ ಆಯಸ್ಸು ಇಲ್ಲವೆಂದ ಕೋಡಿಮಠ ಶ್ರೀ
ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಹೆಚ್ಚಿನ ಆಯಸ್ಸು ಇಲ್ಲ. ಕೇವಲ ಎರಡು ತಿಂಗಳು ಮಾತ್ರ ಸರಕಾರಕ್ಕೆ ಆಯಸ್ಸು ಇದೆ ಎಂದು ಕೋಡಿಕೊಳ್ಳಿ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ತಳಮಳ ಉಂಟಾಗಿದೆ. ಅನೇಕ ಬೆಳವಣಿಗೆಗಳ ನಡುವೆ ಸರಕಾರ ಕೇವಲ ಎರಡು ತಿಂಗಳು ಉಳಿಯಲಿದೆ ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ಮಾತನಾಡಿರುವ ಅವರು, ಮಳೆ ಈ ಬಾರಿ ವರ್ಷದ ಕೊನೆವರೆಗೂ ಆಗಲಿದೆ. ದ್ವೇಷ ಅಸಹನೆ ದಿನೇ ದಿನೇ ಹೆಚ್ಚಾಗುತ್ತದೆ. ಎರಡು ತಿಂಗಳು ಕಾಯ್ದು ನೋಡಿ ಎಂದರು.