ರಾಜ್ಯದಲ್ಲಿ ಕೋವಿಡ್ ಕೇಸು ದಿಢೀರ್ ಏರಿಕೆ!

ಬುಧವಾರ, 8 ಜೂನ್ 2022 (10:43 IST)
ಬೆಂಗಳೂರು : ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಏರುಗತಿ ಮುಂದುವರಿದಿದೆ.

ಮಂಗಳವಾರ 348 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.2.11ಕ್ಕೆ ಜಿಗಿದಿದೆ. ತನ್ಮೂಲಕ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮೂರು ತಿಂಗಳ ನಂತರ ಮುನ್ನೂರರ ಗಡಿ ದಾಟಿದಂತಾಗಿದೆ.

ಮೂರನೇ ಅಲೆ ನಿಸ್ತೇಜಗೊಳ್ಳುತ್ತ ಬಂದ ಅವಧಿಯಾದ ಮಾಚ್ರ್ 3ರಂದು 382 ಮಂದಿಯಲ್ಲಿ ಸೋಂಕು ಪತ್ತೆಯಾದ ಮೂರು ತಿಂಗಳ ಬಳಿಕ ಒಂದೇ ದಿನದ ಸೋಂಕು ಗರಿಷ್ಠ 350ರ ಸಂಖ್ಯೆ ಸಮೀಪಿಸಿದೆ. ಮಂಗಳವಾರ 311 ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್ ಸಾವು ವರದಿಯಾಗಿಲ್ಲ. 16,474 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಏಪ್ರಿಲ್, ಮೇನಲ್ಲಿ ಶೇ.0.23ರ ತನಕ ಕುಸಿದಿದ್ದ ಪಾಸಿಟಿವಿಟಿ ದರ ಈಗ ಶೇ. 2ರ ಗಡಿ ದಾಟಿದೆ.

ಬೆಂಗಳೂರು ನಗರದಲ್ಲಿ 339 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಉಳಿದಂತೆ ಉಡುಪಿ 3, ಉತ್ತರಕನ್ನಡ, ಉಡುಪಿ, ಮೈಸೂರು, ರಾಯಚೂರು, ಕೋಲಾರ ಮತ್ತು ಹಾಸನ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ