ಕೃಷ್ಣಾ ನದಿ ನೀರು ಮರು ಹಂಚಿಕೆ; ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಎದುರಾಗಿದೆ ದೊಡ್ಡ ಸವಾಲು

ಭಾನುವಾರ, 23 ಫೆಬ್ರವರಿ 2020 (12:07 IST)
ಬೆಂಗಳೂರು : ಕೃಷ್ಣಾ ನದಿ ನೀರು ಮರು ಹಂಚಿಕೆಗೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾದ ಹಿನ್ನಲೆಯಲ್ಲಿ  ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ದೊಡ್ಡ ಸವಾಲು ಎದುರಾಗಿದೆ.


ನೀರು ಮರು ಹಂಚಿಕೆಗೆ ತೆಲಂಗಾಣ ಅರ್ಜಿ ಸಲ್ಲಿಸಿರುವ ಹಿನ್ನಲೆ ಬಿ ಸ್ಕೀಮ್ ನಲ್ಲಿ ರಾಜ್ಯಕ್ಕೆ ಹಂಚಿಕೆಯಾದ ನೀರಿನ ರಕ್ಷಣೆ ಮಾಡುವ ಸವಾಲು ಎದುರಾಗಿದೆ. 170 ಟಿಸಿಎಂ ನೀರಿನ ರಕ್ಷಣೆ ರಾಜ್ಯಕ್ಕೆ ದೊಡ್ಡ ಸವಾಲಾಗಿದ್ದು, ಈಗ ಸಮರ್ಥವಾದ  ವಾದ ಮಂಡಿಸುವ ಮಹತ್ವದ ಜವಾಬ್ದಾರಿ ಇದೆ.


ಕರ್ನಾಟಕದ ಪರವಾಗಿ ಸಮರ್ಥವಾದ ವಾದ ಮಂಡಿಸಬೇಕಾಗಿದೆ. ಈ ವಿಚಾರದಲ್ಲಿ ಕೊಂಚ ಎಡವಿದ್ರೂ ನಮ್ಮ ಪಾಲಿನ ನೀರಿಗೆ ಕತ್ತರಿ ಬೀಳಲಿದೆ. ಹೀಗಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ