ಅರ್ಜಿ ವಜಾ ಆಗಿರೋದು ಕಾಂಗ್ರೆಸ್ ಗೆ ಅಪಮಾನ- ಕೆ.ಎಸ್.ಈಶ್ವರಪ್ಪ
ಶುಕ್ರವಾರ, 14 ಡಿಸೆಂಬರ್ 2018 (12:03 IST)
ಬೆಂಗಳೂರು : ರಫೇಲ್ ಡೀಲ್ ತನಿಖೆ ಕುರಿತು ಸುಪ್ರೀಂ ನಲ್ಲಿ ಅರ್ಜಿ ವಜಾವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ದೇಶದಲ್ಲಿ ಕಾಂಗ್ರೆಸ್ ನಿರ್ಣಾಮ ಆಗ್ತಿದೆ ಎಂದು ಹೇಳಿದ್ದಾರೆ.
ರಫೇಲ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ತನಿಖೆಗೆ ಆದೇಶ ಇಲ್ಲ ಎಂದು ಹೇಳಿ ಇಂದು ತೀರ್ಪು ನೀಡಿತ್ತು. ಇದರಿಂದ ಪ್ರಧಾನಿ ಮೋದಿಗೆ ಜಯ ಲಭಿಸಿದ್ದು, ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.
ಈ ಬಗ್ಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು ಅರ್ಜಿ ವಜಾ ಆಗಿರೋದು ಕಾಂಗ್ರೆಸ್ ಗೆ ಅಪಮಾನ. ಇದರಿಂದಾದರೂ ಕಾಂಗ್ರೆಸ್ ಪಾಠ ಕಲಿಯಲಿ. ಕಾಂಗ್ರೆಸ್ ರಫೇಲ್ ಡೀಲ್ ನಲ್ಲಿ ವಿನಾಕಾರಣ ಆರೋಪ ಮಾಡಿತ್ತು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.