ಶಿವಮೊಗ್ಗ: ತಮ್ಮ ಪುತ್ರನಿಗೆ ಟಿಕೆಟ್ ಕೊಡದ ರಾಜ್ಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಮತ್ತೆ ಕೆಎಸ್ ಈಶ್ವರಪ್ಪ ಗುಡುಗಿದ್ದಾರೆ.
ಹಾವೇರಿಯಿಂದ ಪುತ್ರ ಕಾಂತೇಶ್ ಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಶತಾಯ ಗತಾಯ ಪ್ರಯತ್ನಿಸಿದ್ದರು. ಆದರೆ ಪುತ್ರನಿಗೆ ಟಿಕೆಟ್ ಸಿಗಲಿಲ್ಲ. ಇದು ಈಶ್ವರಪ್ಪ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಯಡಿಯೂರಪ್ಪ ವಿರುದ್ಧ ರೊಚ್ಚಿಗೆದ್ದು ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಯಡಿಯೂರಪ್ಪ ಮೇಲೆ ಸಿಟ್ಟಿಗೆದ್ದಿರುವ ಈಶ್ವರಪ್ಪ ಮತ್ತೊಮ್ಮೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಯಡಿಯೂರಪ್ಪ ಅವರ ಒಬ್ಬ ಮಗ ರಾಜ್ಯಾಧ್ಯಕ್ಷ, ಇನ್ನೊಬ್ಬ ಮಗ ಎಂಪಿ. ನನ್ನ ಮಗ ಏನು ತಪ್ಪು ಮಾಡಿದ್ದಾನೆ? ಕಾಂಗ್ರೆಸ್ ನ ಕುಟುಂಬ ಸಂಸ್ಕೃತಿ ರಾಜ್ಯ ಬಿಜೆಪಿಯಲ್ಲೂ ಕಾಣುತ್ತಿದೆ. ಪಕ್ಷ ಕಟ್ಟಿದವರಿಗೆ ನೋವಾಗಿದ್ದು, ಸರಿ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ.
ಯತ್ನಾಳ್ ಬೆಳೆದರೆ ಇನ್ನೊಬ್ಬ ಲಿಂಗಾಯತ ಬೆಳೆಯುತ್ತಾನೆ ಎಂದು ತುಳಿದರು. ಸಿಟಿ ರವಿ ಪಕ್ಷ ಸಂಘಟಿಸಿದರೂ ಟಿಕೆಟ್ ಕೊಡಲಿಲ್ಲ. ಮನೆಗೆ ಹೋದಾಗ ನಿಮಗೆ ಫೋನ್ ಮಾಡಿ ನನಗೆ ಬೆಂಬಲಿಸದಂತೆ ಬೆದರಿಸಬಹುದು. ಆದರೆ ಯಾವುದಕ್ಕೂ ಜಗ್ಗಬೇಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.