ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದ ಜಮೀರ್ ಅಹಮ್ಮದ್ ಗೆ ಈಶ್ವರಪ್ಪ ತಿರುಗೇಟು
ಕಾಂಗ್ರೆಸ್ ಹಿಂದೂ ಮುಸ್ಲಿಮರು ಸಂತೋಷವಾಗಿರಬೇಕೆಂದಿಲ್ಲ. ಅದಕ್ಕೆ ವಿನಾಕಾರಣ ಇಂತಹ ವಿವಾದಿತ ಆಚರಣೆ ಮಾಡುತ್ತಿದ್ದಾರೆ. ನಾವು ಟಿಪ್ಪು ಜಯಂತಿ ವಿರೋಧಿಸಿದ್ದಕ್ಕೆ ಅಧಿಕಾರ ಕಳೆದುಕೊಂಡರೆ ಸಿದ್ದರಾಮಯ್ಯ ಏಕೆ ಅಧಿಕಾರ ಕಳೆದುಕೊಂಡರು ಎಂದು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಈ ನಡುವೆ, ಇಂದು ಜಮೀರ್ ಅಹಮ್ಮದ್ ಮತ್ತು ಮುಸ್ಲಿಂ ಧರ್ಮ ಗುರುಗಳ ನೇತೃತ್ವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಳ್ಳಿ ಖಡ್ಗ, ಟಿಪ್ಪು ಟೋಪಿ ತೊಡಿಸಿ ಗೌರವಾರ್ಪಣೆ ನಡೆಯಿತು. ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿದ ನಾಯಕರು ಸನ್ಮಾನ ಮಾಡಿದ್ದಾರೆ.