ಬಸ್ ಸಂಚಾರ ರದ್ದು: ಪ್ರಯಾಣಿಕರಿಗೆ ತಟ್ಟಿದ ಬಿಸಿ

ಭಾನುವಾರ, 24 ಜುಲೈ 2016 (11:39 IST)
ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳು ಮುಷ್ಕರ ಆರಂಭಿಸಿದ್ದರಿಂದ ಇಂದು ಬೆಳಿಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಸ್ ಸಂಚಾರ ರದ್ದುಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿದೆ. 
 
ರಾಜ್ಯ ಸರಕಾರ ಶೇ.10 ರಷ್ಟು ವೇತನ ಹೆಚ್ಚಳಗೊಳಿಸುವ ಭರವಸೆಗೆ ಸೊಪ್ಪು ಹಾಕದ ಸಂಘಟನೆಗಳು ಶೇ.30 ರಷ್ಟು ವೇತನ ಹೆಚ್ಚಳಗೊಳಿಸುವಂತೆ ಒತ್ತಾಯಿಸಿವೆ. 
 
ಸರಕಾರದ ಬಿಗಿನಿಲುವಿನಿಂದ ಆಕ್ರೋಶಗೊಂಡಿರುವ ನೌಕರರ ಸಂಘಟನೆಗಳು ಮುಷ್ಕರ ಹೊರತುಪಡಿಸಿ ನಮಗೆ ಬೇರೆ ದಾರಿಯಿಲ್ಲ. ಮುಷ್ಕರದಿಂದ ಮಾತ್ರ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟಿವೆ.
 
ನೌಕಕರ ವೇತನದಲ್ಲಿ ಶೇ.10 ರಷ್ಟು ಹೆಚ್ಚಳಗೊಳಿಸಿದಲ್ಲಿ ಸರಕಾರಕ್ಕೆ 1400 ಕೋಟಿ ರೂಪಾಯಿ ಹೊರೆಯಾಗಲಿದೆ. ನಿಗಮಗಳು ನಷ್ಟದಲ್ಲಿ ನಡೆಯುತ್ತಿರುವುದರಿಂದ ಹೆಚ್ಚಿನ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಲಾಭದಲ್ಲಿ ಇದ್ದಲ್ಲಿ ಖಂಡಿತವಾಗಿಯೂ ವೇತನ ಹೆಚ್ಚಳಕ್ಕೆ ಸರಕಾರ ಒಪ್ಪಿಕೊಳ್ಳುತ್ತಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
 
ಏತನ್ಮಧ್ಯೆ, ಕೆಲ ಸಂಘಟನೆಗಳು ಮುಷ್ಕರದಿಂದ ಹಿಂದೆ ಸರಿದಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ