ಕರ್ನಾಟಕದಲ್ಲಿ KSRTC ಕಾರ್ಗೊ ಸೇವೆ

ಗುರುವಾರ, 14 ಸೆಪ್ಟಂಬರ್ 2023 (19:43 IST)
ವಿವಿಧ ಮಾರ್ಗಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವ್ಯವಸ್ಥಿತ ಮತ್ತು ಸಮರ್ಪಕವಾದ ಕಾರ್ಗೊ ಸೇವೆ ಒದಗಿಸಲು ಇನ್ನು 1 ತಿಂಗಳಲ್ಲಿ ಟ್ರಕ್‌ಗಳನ್ನು ರಸ್ತೆಗಿಳಿಸಲಿದೆ. ಕೋವಿಡ್‌ ಸಂದರ್ಭದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ KSRTCಯು ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಪ್ರಯಾಣವನ್ನೂ ನೀಡುತ್ತಿದೆ. ಈ ಎಲ್ಲ ಕಾರಣಗಳಿಂದ ಆದಾಯ ವೃದ್ಧಿಸಿಕೊಳ್ಳಲು ಸಣ್ಣ ಪ್ರಮಾಣದಲ್ಲಿದ್ದ ಕಾರ್ಗೊ ಸೇವೆಯನ್ನು ಮತ್ತಷ್ಟು ಬಲಪಡಿಸಲು 20 ಟ್ರಕ್‌ಗಳನ್ನು ಖರೀದಿಸಲು ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ