ಕೊಟ್ಟ ಮಾತು ಉಳಿಸಿಕೊಂಡ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

ಬುಧವಾರ, 13 ಸೆಪ್ಟಂಬರ್ 2023 (14:00 IST)
ಖಾಸಗಿ ಸಾರಿಗೆ ಸಂಘಟನೆಗಳ  ಪ್ರೋಸಿಡಿಂಗ್ ಕಾಪಿ ಕೈ ತಪ್ಪಿದೆ.ಸಪ್ಟೆಂಬರ್ 11ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ವೇದಿಕೆಯಲ್ಲಿ ಖಾಸಗಿ ‌ಸಾರಿಗೆ ಸಚಿವರು ಸಂಘಟನೆಗಳಿಗೆ 30 ಬೇಡಿಕೆಗಳ ಪೈಕಿ 27 ಬೇಡಿಕೆಗಳನ್ನು ಈಡೇರಿಸಲು ಬದ್ದ ಎಂದು ಮಾತು ಕೊಟ್ಟಿದ್ರು.ಈ ಹಿನ್ನೆಲೆಯಲ್ಲಿ ಸಾರಿಗೆ ಸಂಘಟನೆಗಳು ಲಿಖಿತ ರೂಪದಲ್ಲಿ ಪ್ರೋಸಿಡಿಂಗ್ ಕಾಫಿಯನ್ನು ಮಂಗಳವಾರ ಸಂಜೆಯೊಳಗೆ ನಮಗೆ ನೀಡಬೇಕು ಒಂದು ವೇಳೆ ಮಾತು ತಪ್ಪಿದ್ರೆ ಬುಧವಾರ ಬೆಳಿಗ್ಗೆಯಿಂದ ರಾಜ್ಯ ಸಾರಿಗೆ ಇಲಾಖೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡ್ತಿವಿ ಎಂದು ಎಚ್ಚರಿಕೆ ನೀಡಲಾಗಿತ್ತು.ಈ ಹಿನ್ನೆಲೆಯಲ್ಲಿ ಫುಲ್ ಅಲರ್ಟ್ ಆದ ಸಾರಿಗೆ ಸಚಿವರು ಕೊಟ್ಟ ಮಾತಿನಂತೆ 27 ಬೇಡಿಕೆಗಳ ಬಗ್ಗೆ ಪ್ರೋಸಿಡಿಂಗ್ ಕಾಪಿಯನ್ನು ಸಾರಿಗೆ ಸಂಘಟನೆಗಳ ನಾಯಕರಿಗೆ ರಾಜ್ಯ ಸಾರಿಗೆ ಇಲಾಖೆಯ ಆಯುಕ್ತ ಯೋಗಿಶ್ ಮೂಲಕ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ