ಬಸ್ ಚಲಾಯಿಸಲು ಪರದಾಡಿದ KSRTC ಡ್ರೈವರ್
ಬಸ್ ಚಾಲಕ ಮದ್ಯ ಕುಡಿದು, ಬಸ್ ಓಡಿಸಲು ಸಾಧ್ಯವಾಗದೆ ದಾರಿ ಮಧ್ಯೆಯೇ ಬಸ್ ನಿಲ್ಲಿಸಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯಲ್ಲಿ ನಡೆದಿದೆ. ಬಸ್ ಚಲಾಯಿಸಲು ಸಾಧ್ಯವಾಗದೆ ಹ್ಯಾಂಡ್ ಪೋಸ್ಟ್ ಬಳಿ ಚಾಲಕ ಬಸ್ ನಿಲ್ಲಿಸಿದ್ದಾನೆ. KSRTC ಬಸ್ ಚಾಲಕ ಗೋಪಾಲ ಕೃಷ್ಣನ ನಡವಳಿಕೆಯಿಂದ ಪ್ರಯಾಣಿಕರು ಎಚ್ಚೆತ್ತುಕೊಂಡಿದ್ದಾರೆ. ಬಸ್ ನಿಲ್ಲಿಸುತ್ತಿದಂತೆ ಪ್ರಯಾಣಿಕರು ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಸ್ನಲ್ಲಿ 50 ಕ್ಕೂ ಹೆಚ್ಚು ಜನರು ಮೈಸೂರಿಗೆ ಪ್ರಯಾಣ ಮಾಡಬೇಕಾಗಿತ್ತು.