ಕುಮಾರ್-ಮಧು ಬಂಗಾರಪ್ಪ ಭರ್ಜರಿ ಡ್ಯಾನ್ಸ್
ಊರಿನ ಜಾತ್ರೆಯಲ್ಲಿ ಮಾಜಿ ಸಿಎಂ ದಿವಂಗತ ಎಸ್. ಬಂಗಾರಪ್ಪ ಮಕ್ಕಳು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಸಹೋದರರು ಹಾಡಿಗೆ ಭರ್ಜರಿ ನೃತ್ಯ ಮಾಡಿದ್ದಾರೆ. ಶಿವಮೊಗ್ಗದ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಸಹೋದರರು ನೃತ್ಯ ಮಾಡಿದ್ದಾರೆ. ಶಾಸಕ ಎಸ್. ಕುಮಾರ್ ಬಂಗಾರಪ್ಪ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಹಾಡು ಮತ್ತು ನೃತ್ಯದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಬಟೂರು ಗ್ರಾಮದಲ್ಲಿ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಪ್ರತ್ಯೇಕವಾಗಿ ತೆರಳಿ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಥೋತ್ಸವದ ವೇಳೆ ಒಂದೆಡೆ ಅಶ್ವಮೇಧ ಹಾಡು ಹೇಳಿ ಕುಮಾರ್ ಬಂಗಾರಪ್ಪ ಸಂಭ್ರಮಿಸಿದರು. ಮತ್ತೊಂದೆಡೆ ಮಧು ಬಂಗಾರಪ್ಪ ಮಲೆನಾಡಿನ ಜನಪದ ಕಲೆಯಾದ ಡೊಳ್ಳು ಕಟ್ಟಿ ಹೆಜ್ಜೆ ಹಾಕುವ ಜೊತೆಗೆ ಮಕ್ಕಳೊಂದಿಗೆ ನೃತ್ಯ ಮಾಡಿದರು.