ಜಯನಗರ ಕಾಂಪ್ಲೆಕ್ಸ್ ಬಳಿ 250 ವ್ಯಾಪಾರಿ ಮಳಿಗೆ ತೆರವು ಮಾಡಿದಕ್ಕೆ ರೊಚ್ಚಿಗೆದ್ದ ವ್ಯಾಪಾರಿಗಳು

ಗುರುವಾರ, 9 ಫೆಬ್ರವರಿ 2023 (20:13 IST)
ಬಿಬಿಎಂಪಿ ಒತ್ತುವರಿ ತೆರವು ನಡೆಸುತ್ತಿದ್ದಂತೆಯೇ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.ಟ್ರಾಕ್ಟರ್ ತಂದು ತೆರವು ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಹಾಗು ಪೊಲೀಸರು ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
 
ತೆರವು ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ನಿನ್ನೆ  ಜಯನಗರದ ಬಿಬಿಎಂಪಿ ದಕ್ಷಿಣ ವಲಯ ಜಂಟಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ವ್ಯಾಪಾರಿಗಳಿಂದ  ಪ್ರತಿಭಟನೆ ನಡೆದಿದೆ.ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ರೀತಿ ಬಿಬಿಎಂಪಿ ತೆರವು ಕಾರ್ಯಾಚರಣೆ ನಡೆಸುತ್ತಾರೆಂದು ಬೀದಿ ಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದಾರೆ.ನಾವು ೩೦ ವರ್ಷಗಳಿಂದ ವ್ತಾಪಾರ ನಡೆಸ್ತಾಯಿದ್ದು, ಇಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಜೊತೆಗೆ ಪಾದಚಾರಿಗಳಿಗೂ ಯಾವುದೇ ತೊಂದರೆ ಆಗುತ್ತಿಲ್ಲ.ಚುನಾವಣೆ ಸಂದರ್ಭ ಯಾವಗಲೂ ಈ ರೀತಿ ತೆರವು ಕಾರ್ಯಾಚರಣೆ ನಡೆಸಿ ವ್ಯಾಪಾರಕ್ಕೆ ತೊಂದರೆ ಮಾಡ್ತಾರೆ.ನಮ್ಮಗೆ ನ್ಯಾಯ ಕೊಡಿಸಿ ಎಂದು  ಬೀದಿ ಬದಿ ವ್ಯಾಪಾರಿಗಳು ಪಟ್ಟು ಹಿಡಿದಿದ್ದಾರೆ.ಇಂದೂ ಕೂಡಾ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರಿಂದ ಅಂಗಡಿ ತೆರವು ಮಾಡುವಂತೆ ಸೂಚನೆ ನೀಡಲಾಗಿದೆ ಹೀಗಾಗಿ ವ್ಯಾಪಾರಿಗಳು ಇನ್ನಷ್ಟು ಆಕ್ರೋಶಗೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ