ವಿದ್ಯುತ್ ಖರೀದಿಯಲ್ಲಿ ಸಾವಿರಾರು ಕೋಟಿ ಅವ್ಯವಹಾರ: ಕುಮಾರಸ್ವಾಮಿ ಆರೋಪ

ಶುಕ್ರವಾರ, 9 ಜೂನ್ 2017 (15:38 IST)
ವಿದ್ಯುತ್ ಖರೀದಿಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
 
ವಿದ್ಯುತ್ ಖರೀದಿಯಲ್ಲಿ 20 ರಿಂದ 30 ಸಾವಿರ ಕೋಟಿ ರೂಪಾಯಿ ಅವ್ಯವಹಾರವಾಗಿದೆ. ರಾಜ್ಯ ಸರಕಾರ ಅವ್ಯವಹಾರವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಅವ್ಯವಹಾರದ ದಾಖಲೆಗಳನ್ನು ನಾನೇ ಬಿಡುಗಡೆ ಮಾಡುತ್ತೇನೆ ಎಂದು ಗುಡುಗಿದ್ದಾರೆ.
 
ರಾಜ್ಯ ಸರಕಾರ ಅವ್ಯವಹಾರ ಬಯಲಿಗೆ ಬಾರದಿರಲು ಸದನ ಸಮಿತಿ ರಚಿಸುವ ನಾಟಕವಾಡುತ್ತಿದೆ. ಅವ್ಯವಹಾರವನ್ನೇ ಮುಚ್ಚಿಡಲು ಸರಕಾರ ಸದನ ಸಮಿತಿಯ ನೆಪವೊಡ್ಡುತ್ತಿದೆ ಎಂದು ಕಿಡಿಕಾರಿದ್ದಾರೆ
 
ವಿಧಾನಸಭೆ ಕಲಾಪದಲ್ಲಿ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದ್ದರಿಂದಲೇ ಕಲಾಪಕ್ಕೆ ಶಾಸಕರು ಗೈರುಹಾಜರಾಗುತ್ತಿದ್ದಾರೆ. ಬರಗಾಲ, ರೈತರ ಸಮಸ್ಯೆಗಳ ಕುರಿತಂತೆ ಚರ್ಚೆಯಾಗದಿರುವುದು ವಿಷಾದಕರ ಸಂಗತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ