ಖೋಖೋ ವಿಶ್ವಕಪ್‌ನಲ್ಲಿ ಸಾಧನೆ ಮಾಡಿದ ಗೌತಮ್, ಚೈತ್ರಾರನ್ನು ಗೌರವಿಸಿದ ಕುಮಾರಸ್ವಾಮಿ

Sampriya

ಮಂಗಳವಾರ, 21 ಜನವರಿ 2025 (19:52 IST)
Photo Courtesy X
ಬೆಂಗಳೂರು: 2025ರ ಪುರುಷರ ಹಾಗೂ ಮಹಿಳಾ ಖೋಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕದ ಎಂ.ಕೆ.ಗೌತಮ್ ಹಾಗೂ ಚೈತ್ರಾ ಅವರನ್ನು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರು ಸನ್ಮಾನಿಸಿದರು.

ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಕರ್ನಾಟಕದ ಗೌತಮ್ ಮತ್ತು ಚೈತ್ರಾ ಅವರನ್ನು ಗೌರವವಿಸಿದರು.

ಮುಖ್ಯ ಕೋಚ್ ಸುಮಿತ್ ಭಾಟಿಯಾ ಹಾಗೂ ತಂಡದ ಮ್ಯಾನೇಜರ್ ರಾಜಕುಮಾರಿ ಅವರನ್ನು ಕೂಡ ಗೌರವಿಸಲಾಯಿತು.


ನಿಮ್ಮ ಭವಿಷ್ಯ ಉಜ್ವಲವಾಗಲಿ ಹಾಗೂ ನಿಮ್ಮ ಸಾಧನೆ ಯುವ ಜನರಿಗೆ ಪ್ರೇರಣೆಯಾಗಲಿ ಎಂದು ಹಾರೈಸಲಾಯಿತು.

ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಆಶಯದಂತೆ ಕೇಂದ್ರ ಸರಕಾರವು ದೇಶೀಯ ಕ್ರೀಡೆಗಳಿಗೆ ಬಹಳಷ್ಟು ಒತ್ತು ನೀಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ