ಪಾಪದ ಕೊಡ ತುಂಬಿರುವ ಕಾಂಗ್ರೆಸ್‌ಗೆ ಸರಿಯಾದ ಶಿಕ್ಷೆಯಾಗುತ್ತದೆ: ಕುಮಾರಸ್ವಾಮಿ

Sampriya

ಶುಕ್ರವಾರ, 3 ಜನವರಿ 2025 (16:47 IST)
ಬೆಂಗಳೂರು: ಜೆಡಿಎಸ್ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನ ಮಾತನಾಡಿದ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಆಪರೇಷನ್ ಹಸ್ತ ನಡೆಯುತ್ತಿದೆ.  ಆದರೆ ಇದು ಯಾವುದು ವರ್ಕ್ ಆಗಲ್ಲ. ಜೆಡಿಎಸ್ ಮುಗಿಸಬೇಕು ಎಂದು ಹೇಳಿ 12 ಜನ ಕರೆದುಕೊಂಡು ಬನ್ನಿ, 13 ಜನ ಕರೆದುಕೊಂಡು ಬನ್ನಿ ಎಂದು ನಡೆಯುತ್ತಿದೆ.
ಈ ವಿಚಾರವೆಲ್ಲ ನನಗೆ ತಿಳಿದಿದೆ. ಆದರೆ ನಮ್ಮ ಶಾಸಕರು ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.  

ಕಾಂಗ್ರೆಸ್‌ನವರು ಏನೇನು ಮಾಡುತ್ತಿದ್ದಾರೆ ಗೊತ್ತಿದೆ. ನಮ್ಮ ಎಲ್ಲಾ ಶಾಸಕರು ಏನೇನು ನಡೆಯುತ್ತಿದೆ ಎಂದು ನನ್ನ ಬಳಿ ಹೇಳಿದ್ದಾರೆ. ಜೆಡಿಎಸ್‌ಗೆ ಯಾವುದೇ ಶಾಕು, ವೀಕು ಮಾಡೋಕೆ ಆಗೊಲ್ಲ. ಕಾಂಗ್ರೆಸ್‌ನವರ ಪಾಪದ ಕೊಡ ತುಂಬಿದೆ. ದೇವರೇ ಕಾಂಗ್ರೆಸ್‌ನವರಿಗೆ ಶಿಕ್ಷೆ ಕೊಡುತ್ತಾನೆ ಅನ್ನೋದು ನನ್ನ ಅಭಿಪ್ರಾಯ ಎಂದು ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ