ಕೊಟ್ಟ ಮಾತಿನಂತೆ ಶಿರೂರು ಗುಡ್ಡ ಕುಸಿತ ಹೋಟೆಲ್‌ ಮಾಲೀಕನ ಪುತ್ರಿಗೆ ಕೆಲಸ ನೀಡಿದ ಕುಮಾರಸ್ವಾಮಿ

Sampriya

ಶನಿವಾರ, 19 ಅಕ್ಟೋಬರ್ 2024 (19:38 IST)
Photo Courtesy X
ಉತ್ತರ ಕನ್ನಡ:  ಭಾರೀ ಮಳೆಗೆ ಅಂಕೋಲ ತಾಲೂಕಿನ ಶಿರೂರು ಗುಡ್ಡ ಪ್ರಕರಣ ಸಂಬಂಧ ಕೊಟ್ಟ ಮಾತಿನಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡೆದುಕೊಂಡಿದ್ದಾರೆ.

ಇದೀಗ ಹೋಟೆಲ್​ ಮಾಲೀಕ ಜಗನಾಥ್​ ಅವರ ಪುತ್ರಿ ಎನ್.​ ಕೃತಿ ಅವರಿಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಬಿಹೆಚ್​ಇಎಲ್​​ನಲ್ಲಿಉದ್ಯೋಗ ಕಲ್ಪಿಸಿದ್ದಾರೆ.

 ಮಂಡ್ಯದ ಸರ್​ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಕುಮಾರಸ್ವಾಮಿ ಅವರು ಕೃತಿಕಾ ಅವರಿಗೆ ನೇಮಕಾತಿ ಪತ್ರ ನೀಡಿದರು.

ಕೈಗಾ ಅಣು ವಿದ್ಯುತ್ ಸ್ಥಾವರದ ಬಿಹೆಚ್​ಇಎಲ್​ನಲ್ಲಿ ಉದ್ಯೋಗ ಕೊಡಿಸುವುದಾಗಿ ಈ ಹಿಂದೆ ಹೆಚ್​ಡಿ ಕುಮಾರಸ್ವಾಮಿ ಅವರು ಎನ್​. ಕೃತಿ ಅವರಿಗೆ ದೂರವಾಣಿ ಕರೆ ಮಾಡಿ ಹೇಳಿದ್ದರು. ಕೊಟ್ಟ ಮಾತಿನಂತೆ ಹೆಚ್​ಡಿ ಕುಮಾರಸ್ವಾಮಿ ಅವರು ಕೃತಿಕಾಗೆ ಕೆಲಸ ಕೊಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ