ತಪ್ಪು ಮಾಡಿಲ್ಲವಾದರೇ ಡೈರಿಯನ್ನು ಬಹಿರಂಗಗೊಳಿಸಿ: ಸಿಎಂಗೆ ಕುಮಾರಸ್ವಾಮಿ

ಮಂಗಳವಾರ, 21 ಫೆಬ್ರವರಿ 2017 (19:29 IST)
ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಹಣ ಸಂದಾಯ ಮಾಡಿಲ್ಲವೆಂದಾದಲ್ಲಿ ಡೈರಿಯನ್ನು ಬಹಿರಂಗಗೊಳಿಸಿ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.
 
ಕಾಂಗ್ರೆಸ್ -ಬಿಜೆಪಿ ನಾಯಕರ ವಿರುದ್ಧದ ಜೆಡಿಎಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು, ಯಡಿಯೂರಪ್ಪ ನೈತಿಕತೆಯನ್ನು ಮುಖ್ಯಮಂತ್ರಿ ಪ್ರಶ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ನೈತಿಕತೆಯನ್ನು ಯಡಿಯೂರಪ್ಪ ಪ್ರಶ್ನಿಸುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಜನತೆಗೆ ಪುಗ್ಸಟ್ಟೆ ಮನೋರಂಜನೆ ಒದಗಿಸುತ್ತಿವೆ ಎಂದು ಲೇವಡಿ ಮಾಡಿದರು.
 
ಎಂಎಲ್‌ಸಿ ಗೋವಿಂದರಾಜು ಬಳಿ ದೊರೆತಿರುವ ಡೈರಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಹಣವನ್ನು ಹೈಕಮಾಂಡ್ ಮುಖಂಡರಿಗೆ ಸಲ್ಲಿಸಲಾಗಿದೆ ಎನ್ನುವುದನ್ನು ಉಲ್ಲೇಖಿಸಲಾಗಿದೆ ಎಂದು ಯಡಿಯೂರಪ್ಪ ಸಿಎಂ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.
 
ವಿಧಾನಸಭೆಯಲ್ಲಿ ಯಡಿಯೂರಪ್ಪ ಪರ ಕನಿಕರದಿಂದ ಮಾತನಾಡಿಲ್ಲ. ನ್ಯಾಯದ ಪರವಾಗಿ ಮಾತನಾಡಿದ್ದೇನೆ. ಮಾಜಿ ಡೈರಿಯ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬೆತ್ತಲಾಗಿದ್ದಾರೆ ಎಂದು ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ