Video: ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಗೆ ಶೇಮ್ ಎಂದು ಮರ್ಯಾದೆ ಕಳೆದ ಪಾಕಿಸ್ತಾನಿಯರು

Krishnaveni K

ಬುಧವಾರ, 18 ಜೂನ್ 2025 (10:23 IST)
ನ್ಯೂಯಾರ್ಕ್: ಸೇನಾ ಮುಖ್ಯಸ್ಥ  ಆಸಿಫ್ ಮುನೀರ್ ಅಮೆರಿಕಾಗೆ ಬಂದಾಗ ಅಲ್ಲಿನ ಪಾಕಿಸ್ತಾನಿ ಪ್ರಜೆಗಳು ಶೇಮ್ ಶೇಮ್ ಎಂದು ಸ್ಲೋಗನ್ ಕೂಗಿ ಮರ್ಯಾದೆ ಕಳೆದಿದ್ದಾರೆ.

ಅಮೆರಿಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಆಹ್ವಾನದ ಮೇರೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಬಂದಿದ್ದರು. ಈ ವೇಳೆ ಅವರು ಹೋಟೆಲ್ ಗೆ ಬಂದಿಳಿಯುತ್ತಿದ್ದಂತೇ ಅಲ್ಲಿದ್ದ ಪಾಕಿಸ್ತಾನಿಯರು ಘೋಷಣೆಗಳನ್ನು ಕೂಗಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ್ ನಡೆಸಿತ್ತು. ಆ ಬಳಿಕ ಪಾಕಿಸ್ತಾನ ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಇದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿ ಮರ್ಮಾಘಾತ ನೀಡಿತ್ತು. ಇದರ ಬೆನ್ನಲ್ಲೇ ಆಸಿಫ್ ವಿರುದ್ಧ ಪಾಕಿಸ್ತಾನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆರಿಕಾಗೆ ಬಂದಿಳಿದ ಆಸಿಫ್ ರನ್ನು ನರಹಂತಕ, ಸ್ವತ ಹಿತಾಸಕ್ತಿಗಾಗಿ ಪಾಕಿಸ್ತಾನಿಯರನ್ನು ಬಲಿ ಕೊಟ್ಟ ಪಾಪಿ ನಾಚಿಕೆಯಾಗಬೇಕು ನಿನಗೆ ಎಂದು ಆಸಿಫ್ ಮುನೀರ್ ವಿರುದ್ಧ ಘೋಷಣೆ ಕೂಗಿ ಮರ್ಯಾದೆ ಕಳೆದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Field Marshal Asif Munir being abused in Washington DC by Pakistanis, this is the real respect that Asim Munir deserves!

He is the biggest coward & corrupt Pak Military officer, ho hs visited USA to waste country's resources on lavish travel & hotels.#CorruptPakArmy pic.twitter.com/hY7lmEK0BD

— ManhasAnupama (@manhas_anupama) June 17, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ