Kumbhmela Stampede: ಮಹಾಕುಂಭಮೇಳದಲ್ಲಿ ಮಹಾ ದುರಂತ: ಕಾಲ್ತುಳಿತದಲ್ಲಿ ಹಲವರಿಗೆ ಗಾಯ
ಇಂದು ಮೌನಿ ಅಮವಾಸ್ಯೆ ನಿಮಿತ್ತ ಪುಣ್ಯ ಸ್ನಾನ ಮಾಡಲು ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ತ್ರಿವೇಣಿ ಸಂಗಮದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಇದರಿಂದಾಗಿ ನೂಕುನುಗ್ಗಲು ಉಂಟಾಗಿದೆ. ಹೀಗಾಗಿ ಹಲವರು ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಸುಮಾರು 25 ಮಂದಿ ಮಹಿಳೆಯರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಯಾಗ್ ರಾಜ್ ನಲ್ಲಿ ಕುಂಭಮೇಳದಲ್ಲಿ ಅವಘಡ ಸಂಭವಿಸಿದರೆ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ನಿರ್ಮಿಸಲಾಗಿತ್ತು.
ಸಾಕಷ್ಟು ಜನ ಜಂಗುಳಿಯಿರುವುದರಿಂದ ಆಂಬ್ಯುಲೆನ್ಸ್ ಗಳೂ ಸಂಚರಿಸಲು ಕಷ್ಟವಾಗಲಿದೆ. ಇಂದು ಮೌನಿ ಅಮವಾಸ್ಯೆ ನಿಮಿತ್ತ ಕೋಟ್ಯಾಂತರ ಭಕ್ತರು ಇಂದು ಕುಂಭಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಜನದಟ್ಟಣೆ ವಿಪರೀತ ಎನ್ನುವಷ್ಟು ಹೆಚ್ಚಾಗಿದೆ.