ಕೆರೆ ಗಬ್ಬು ನಿವಾಸಿಗಳ ಪರದಾಟ

ಸೋಮವಾರ, 21 ಮಾರ್ಚ್ 2022 (15:14 IST)
ಒಂದು ಕಾಲದಲ್ಲಿ ನೀರು ತುಂಬಿ ವಲಸೆ ಹಕ್ಕಿಗಳು ಹಾಗೂ ಸುಂದರವಾದ ಹೂವುಗಳಿಗೆ ನೆಲೆಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ (ಹಳೆ ವಿಮಾನ ನಿಲ್ದಾಣದ ಆಚೆ) ವಿಭೂತಿ ಪುರ ಕೆರೆ ಈಗ ಸರಿಯಾದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.
ಒಂದು ಕಡೆ ಮಾತ್ರ ನೀರು ನಿಂತಿದ್ದು, ಉಳಿದೆಲ್ಲಾ ಕಡೆಗಳಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ.
 
ಗತ ವೈಭವದ ದಿನಗಳಲ್ಲಿ ಕೆರೆಯನ್ನು ನೋಡಿದ ವಾಯುವಿಹಾರಿಗಳು, ಅದರ ಈಗ ಸ್ಥಿತಿ ಕಂಡು ಆಕ್ರೋಶಗೊಂಡಿದ್ದಾರೆ.
ಕೆರೆಯ ತುಂಬೆಲ್ಲಾ ಗಿಡಗಂಟಿಗಳು ನಾಯಿಕೊಡೆಗಳಂತೆ ಬೆಳೆದಿವೆ. ಕೆರೆಯ ಒಂದು ತುದಿಯಲ್ಲಿರುವ ಉದ್ಯಾನವನ ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ಮಕ್ಕಳಿಗಾಗಿ ಇದ್ದ ಉಪಕರಣಗಳು ಮುರಿದು ಬಿದ್ದಿವೆ.
 
ಒಂದು ಕಾಲದಲ್ಲಿ 43 ಎಕರೆಗೆ ಚಾಚಿಕೊಂಡಿದ್ದ ಕೆರೆ ಗಾತ್ರ ಇದೀಗ ಒತ್ತುವರಿಯಿಂದಾಗಿ ಕುಗ್ಗಿದೆ. ಕೆರೆಯ ಸುತ್ತಲಿನ ಮನೆಗಳಿಂದ ಸಂಸ್ಕರಿಸದ ಚರಂಡಿ ನೀರನ್ನು ಹರಿಸುತ್ತಿರುವುದರಿಂದ ಅದು ಹಾಳಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ನಿವಾಸಿಯೊಬ್ಬರು ದು:ಖ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ