ಬಲಭೀಮಸೇನನ್ನು ನೋಡಲು ಬಂದ ಲಕ್ಷ ಲಕ್ಷ ಜನರು

ಶನಿವಾರ, 14 ಡಿಸೆಂಬರ್ 2019 (16:56 IST)
ಬಲಭೀಮಸೇನ ದೇವರ ಜಾತ್ರೆ ಹಾಗೂ ಅದ್ಧೂರಿ ರಥೋತ್ಸವಕ್ಕೆ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾಗಿದ್ದಾರೆ.

ಕಲಬುರಗಿ ಸೇಡಂ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೋತಕಪಲ್ಲಿಯ ಶ್ರೀ ಬಲಭೀಮಸೇನ ದೇವರ ಅದ್ಧೂರಿ ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು.

ರಾಜ್ಯ ಸೇರಿದಂತೆ ಗಡಿ ರಾಜ್ಯಗಳಾದ ತೆಲಂಗಾಣ ಮತ್ತು ಮಹಾರಾಷ್ಟ್ರದಿಂದಲೂ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ರು. ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಬಲಭೀಮಸೇನ ಉದ್ಭವ ಮೂರ್ತಿ ಮತ್ತು ರಥದಲ್ಲಿ ಪ್ರತಿಷ್ಠಾಪಿಸಿದ ಉತ್ಸವ ವಿಶೇಷ ಅಲಂಕಾರ ಮಾಡಲಾಗಿತ್ತು. 

ಬೆಳಗ್ಗೆಯಿಂದಲೇ ಮುಖ್ಯ ಅರ್ಚಕ ಭೀಮಾಚಾರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಗ್ರಾಮದ ತುಂಬೆಲ್ಲಾ ತಳಿರು ತೋರಣಗಳನ್ನು ಕಟ್ಟಲಾಗಿತ್ತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಹಿಂದೂ, ಮುಸ್ಲಿಂ, ಕ್ರೈಸ್ತ್ ಸೇರಿ ಸಕಲ ಮತ, ಜಾತಿ, ಪಂಗಡದ ಜನರು ಭಾಗವಹಿಸಿ ಭಾವೈಕ್ಯತೆಯ ಪ್ರತೀಕವಾಗಿ ಬಲಭೀಮಸೇನ ಜಾತ್ರೆ ಆಚರಣೆ ಮಾಡಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ