ಭೂ ಕಬಳಿಕೆ ಪ್ರಕರಣ: ಹಸ್ತಕ್ಷೇಪವಿಲ್ಲ ಎಂದ ಅರವಿಂದ ಜಾಧವ್!
ಬುಧವಾರ, 24 ಆಗಸ್ಟ್ 2016 (11:30 IST)
ಸರಕಾರಿ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಇದೊಂದು ಪೋಡಿ ಕೇಸ್, ಇದರಲ್ಲಿ ನನ್ನ ಹಸ್ತಕ್ಷೇಪವಿಲ್ಲ ಎಂದು ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಖರೀದಿಸಿರುವ ಭೂಮಿ ಗೋಮಾಳದ ಜಮೀನಲ್ಲ. ಜಮೀನು ಖರೀದಿಯಲ್ಲಿ ಕಾನೂನೂ ಉಲ್ಲಂಘನೆ ಹಾಗೂ ಯಾವುದೇ ರೀತಿಯ ಆಕ್ರಮ ನಡೆದಿಲ್ಲ. ಕಂದಾಯ ಇಲಾಖೆಯ ನಿಯಮದಂತೆ ಜಮೀನನ್ನು ಖರೀದಿಸಲಾಗಿದೆ ಎಂದು ಹೇಳಿದರು.
ಪ್ರಕರಣ ಕುರಿತು ನಮಗೂ ಕೋರ್ಟ್ ಮೊರೆ ಹೋಗುವ ಅವಕಾಶವಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿ ಕೇಳಿದ್ದಾರೆ. ಅವರಿಗೆ ದಾಖಲೆ ಸಮೇತ ವರದಿಯನ್ನು ಒಪ್ಪಿಸುತ್ತೇನೆ ಎಂದು ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ