ವಿರಾಟ್ ಕೊಹ್ಲಿ ಇಲ್ಲದಿರುವುದು ಏಷ್ಯಾ ಕಪ್ ನಲ್ಲಿ ನಮಗೆ ಒಳ್ಳೆದೇ ಆಯ್ತು ಎಂದವರು ಯಾರು ಗೊತ್ತಾ?!

ಶನಿವಾರ, 8 ಸೆಪ್ಟಂಬರ್ 2018 (09:27 IST)
ದುಬೈ: ಇಂಗ್ಲೆಂಡ್ ಸರಣಿ ಮುಗಿದ ತಕ್ಷಣ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಇಲ್ಲದೇ ಟೀಂ ಇಂಡಿಯಾವನ್ನು ಎದುರಿಸುವುದು ಸುಲಭ ಎಂದು ಪಾಕಿಸ್ತಾನ ಕ್ರಿಕೆಟಿಗ ಹಸನ್‍ ಅಲಿ ಹೇಳಿಕೊಂಡಿದ್ದಾರೆ.

ಕೊಹ್ಲಿ ಇಲ್ಲದೇ ಇರುವ ಕಾರಣ ನಮಗೆ ಒಳ್ಳೆದೇ ಆಯ್ತು. ಹೀಗಾಗಿ ಟೀಂ ಇಂಡಿಯಾವನ್ನು ಎದುರಿಸುವುದು ಸುಲಭ. ಕಳೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋತಿದ್ದರಿಂದ ಒತ್ತಡವೆಲ್ಲವೂ ಈಗ ಟೀಂ ಇಂಡಿಯಾ ಮೇಲೆಯೇ ಇದೆ ಎಂದು ಹಸನ್ ಹೇಳಿಕೊಂಡಿದ್ದಾರೆ.

‘ದುಬೈ ಎಂದರೆ ನಮಗೆ ತವರಿದ್ದಂತೆ. ಇಲ್ಲಿನ ಪರಿಸ್ಥಿತಿ ನಮಗೆ ಅನುಕೂಲಕರವಾಗಿದೆ.  ಇಲ್ಲಿ ಹೇಗೆ ಆಡಬೇಕೆಂದು ನಮಗೆ ಅವರಿಗಿಂತ ಚೆನ್ನಾಗಿ ಗೊತ್ತಿದೆ. ಹಾಗಾಗಿ ಒತ್ತಡ ಟೀಂ ಇಂಡಿಯಾ ಮೇಲೆ ಹೆಚ್ಚಿದೆ’ ಎಂದು ಹಸನ್ ಅಭಿಪ್ರಾಯಪಟ್ಟಿದ್ದಾರೆ. ಸೆ. 19 ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ