ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬೇಕಾ, ಹೇಗೆ ಮಾಡೋದು, ಕೊನೆಯ ದಿನಾಂಕ ಯಾವುದು ನೋಡಿ

Krishnaveni K

ಬುಧವಾರ, 7 ಆಗಸ್ಟ್ 2024 (10:08 IST)
ಬೆಂಗಳೂರು: ರೇಷನ್ ಕಾರ್ಡ್ ಗೆ ತಿದ್ದುಪಡಿ ಮಾಡಲು ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅವಕಾಶ ನೀಡಿದೆ. ಇದರ ಕೊನೆಯ ದಿನಾಂಕ, ಹೇಗೆ ತಿದ್ದುಪಡಿ ಮಾಡುವುದು ಇತ್ಯಾದಿ ವಿವರ ಇಲ್ಲಿದೆ.

ರೇಷನ್ ಕಾರ್ಡ್ ಗೆ ತಿದ್ದುಪಡಿ ಮಾಡಲು ಸರ್ಕಾರ ಆಗಸ್ಟ್ 10 ರವರೆಗೆ ಅವಕಾಶ ನೀಡಿದೆ. ಈ ದಿನದೊಳಗೆ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡುವುದಿದ್ದರೆ ಮಾಡಿಕೊಳ್ಳಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಗಸ್ಟ್ 10 ರೊಳಗೆ ತಿದ್ದುಪಡಿ ಮಾಡಬಹುದಾಗಿದೆ.

ಏನೆಲ್ಲಾ ದಾಖಲೆಗಳು ಬೇಕು?
ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಹಾಲಿ ಪಡಿತರ ಚೀಟಿ ಅಗತ್ಯವಾಗಿ ಬೇಕಾಗುತ್ತದೆ.

ಏನೆಲ್ಲಾ ತಿದ್ದುಪಡಿ ಮಾಡಬಹುದು
ಸದಸ್ಯರ ಹೆಸರು ತಪ್ಪಾಗಿದ್ದಲ್ಲಿ ತಿದ್ದುಪಡಿ
ಮನೆ ಯಜಮಾನರ ಹೆಸರು ಬದಲಾವಣೆ
ಹೊಸ ಸದಸ್ಯರ ಸೇರ್ಪಡೆ
ವಿಳಾಸ ಬದಲಾವಣೆ
ಮೃತರ ಹೆಸರು ತೆಗೆಯುವುದು
ಫೋಟೊ ಮತ್ತು ಬಯೋಮೆಟ್ರಿಕ್ ಅಪ್ಡೇಟ್

ಆಫ್ ಲೈನ್ ಆಗಿ ಎಲ್ಲಿ ತಿದ್ದುಪಡಿ ಮಾಡಬೇಕು?
ಆಫ್ ಲೈನ್ ಆಗಿ ತಿದ್ದುಪಡಿ ಮಾಢುವುದಿದ್ದರೆ ಹತ್ತಿರುವಿರುವ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ಮೇಲೆ ಹೇಳಿದ ದಾಖಲೆಯೊಂದಿಗೆ ತೆರಳಿ ಆನ್ ಲೈನ್ ನಲ್ಲಿ ತೆರಳಿ ಅರ್ಜಿ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತಿದ್ದುಪಡಿಗೆ ಅವಕಾಶವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ