ಡೊಳ್ಳಿನ ಬೃಹತ್ ಹಾರದಿಂದ ಅದ್ದೂರಿ ಸನ್ಮಾನ

ಬುಧವಾರ, 25 ಜನವರಿ 2023 (10:30 IST)
ರಾಯಚೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಂಚರತ್ನ ಯಾತ್ರೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ ಪಟ್ಟಣದಿಂದ ಆರಂಭವಾಗಿದೆ.

ಈ ವೇಳೆ ಅಲ್ಲಿನ ಕಾರ್ಯಕರ್ತರು ಡೊಳ್ಳಿನ ಹಾರ ಹಾಕಿ ಸನ್ಮಾನಿಸಿದರು. ಹೆಚ್ಡಿಕೆಯನ್ನು ಅದ್ಧೂರಿಯಾಗಿ ಸ್ವಾಗತಿಸಿದ ನೂರಾರು ಕಾರ್ಯಕರ್ತರು ಮುದಗಲ್ನಲ್ಲಿ ಡೊಳ್ಳಿನ ಹಾರ ಹಾಕಿ ಸನ್ಮಾನಿಸಿದರು.

25ಕ್ಕೂ ಹೆಚ್ಚು ಡೊಳ್ಳುಗಳಿಂದ ತಯಾರಿಸಿದ ಬೃಹತ್ ಹಾರ ಹಾಕುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಮೇಲಿನ ಅಭಿಮಾನ ಮೆರೆದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ