ಜಾರಕಿಹೊಳಿ ಪರ ಲಕ್ಷ್ಮೀ ಹೆಬ್ಬಾಳ್ಕರ ಬ್ಯಾಟಿಂಗ್ ?
ಸಚಿವ ಸ್ಥಾನ ಕೈತಪ್ಪಿರುವ ರಮೇಶ ಜಾರಕಿಹೊಳಿ ಪರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬ್ಯಾಟಿಂಗ್ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಕಳೆದ ಪಿಎಲ್ ಡಿ ಬ್ಯಾಂಕಿನ ಚುಣಾವಣೆಯಲ್ಲಿ ಬದ್ಧ ವೈರಿಯಾಗಿದ್ದ ರಮೇಶ ಜಾರಕಿಹೊಳಿ ಪರವಾಗಿ ಶಾಸಕಿ ಲಕ್ಷ್ಮಿ ಬ್ಯಾಟಿಂಗ್ ಬೀಸಿದ್ದಾರೆ.
ರಮೇಶ ಜಾರಕಿಹೊಳಿ ಅವರಿಗೆ ಲಕ್ಷ್ಮಿ ಹೆಬ್ಬಾಳಕರ ಹೆದರಿದ್ದಾರಾ ಎನ್ನುವ ಮಾತುಗಳು ಕಾರ್ಯಕರ್ತರಿಂದ ಈಗ ಕೇಳಿಬರುತ್ತಿವೆ.
ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಭಾವುಕರಾದ ಲಕ್ಷ್ಮಿ ಹೆಬ್ಬಾಳಕರ ಅವರ ನಡೆ ಹಿಂದೆ ಹಲವು ಅನುಮಾನಗಳು ಚರ್ಚೆಗೆ ಬರುತ್ತಿವೆ.