ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

ಗುರುವಾರ, 6 ಜೂನ್ 2019 (11:10 IST)
ಬೆಳವಾವಿ : ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರ ಸಮರ ತಾರಕಕ್ಕೇರಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.




ಬೆಳಗಾವಿ ಕ್ಷೇತ್ರದಲ್ಲಿ ರೈತರ ವಿರೋಧದ ನಡುವೆಯೂ ಎಸ್ ಟಿಪಿ ಕಾಮಗಾರಿ ಆರಂಭಿಸಿದ ಹಿನ್ನಲೆ ಜಮೀನು ಕಳೆದುಕೊಂಡ ರೈತರಿಗೆ ನ್ಯಾಯ ಕೊಡಿಸುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಪದೇಪದೇ ಅನ್ಯಾಯವಾಗ್ತಿದೆ. ನಮ್ಮ ಗಮನಕ್ಕೆ ತರದೆ ಎಸ್ ಟಿಪಿ ಕಾಮಗಾರಿ ಆರಂಭಿಸಲಾಗಿದೆ. ಅನ್ಯಾಯವನ್ನ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಸರಿ ಮಾಡಬೇಕಿದೆ ಎಂದು ಹೇಳಿದ್ದಾರೆ.


ಖುದ್ದು ನಾನೇ 2 ಬಾರಿ ಸತೀಶ್ ಜಾರಕಿಹೊಳಿ ಜೊತೆಗೆ ಮಾತನಾಡಿದ್ದೇನೆ. 30 ಲಕ್ಷ ಪರಿಹಾರ ಕೊಡಿಸಬಹುದು ಎಂದು ಜಾರಕಿಹೊಳಿ ಹೇಳಿದ್ದಾರೆ. ಇದುವರೆಗೂ ಸತೀಶ್ ಜಾರಕಿಹೊಳಿ ರೈತರ ಮನವೊಲಿಸುವ ಕೆಲಸ ಮಾಡಿಲ್ಲ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಿಯೊಗ ಕರೆದುಕೊಂಡು ಹೋಗ್ಬೇಕು. ಸಿಎಂ ಜೊತೆ ಸಭೆ ನಡೆಸಿ ಪರಿಹಾರ ನೀಡುವ ಬಗ್ಗೆ ಚಿಂತಿಸಬೇಕಿದೆ. ರೈತರ ಜೀವನದ ಜೊತೆಗೆ ಚೆಲ್ಲಾಟವಾಡುವುದು ಬೇಡ, ನ್ಯಾಯ ಬೇಕು. ರೈತರಹೋರಾಟದಲಲಿ ಅನ್ಯಾಯವಾದರೆ ಜಿಲ್ಲಾಡಳಿತವೇ ಹೊಣೆ. 2 ದಿನದಲ್ಲಿ ರೈತರ ಮನವೊಲಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ