ನಾಳೆ ರಾಜ್ಯಸಭೆ ಚುನಾವಣೆಯ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸುತ್ತಿದ್ದು, ಸುಧಾ ನಾರಾಯಣಮೂರ್ತಿ ಅವರ ಹೆಸರನ್ನು ಅಂತಿಮಗೊಳಿಸಬೇಕು ಎಂಬ ಆಶಯ ನಮ್ಮದಾಗಿತ್ತು. ಆದರೆ, ಅವರು ರಾಜಕೀಯದಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸಭೆಗೆ ಕನ್ನಡಿಗರನ್ನೇ ನೇಮಕ ಮಾಡಬೇಕು ಎಂಬ ಆಶಯದಿಂದ ಅವರನ್ನು ಪಕ್ಷೇತರವಾಗಿ ಚುನಾವಣೆ ಎದುರಿಸಲು ಮನವಿ ಮಾಡಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.