ಇಂದಿನಿಂದ ವಿಧಾನಮಂಡಲ ಅಧಿವೇಶನ

ಸೋಮವಾರ, 3 ಜುಲೈ 2023 (08:22 IST)
ಬೆಂಗಳೂರು : ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ ಆಗಲಿದ್ದು, 10 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ.
 
ಇವತ್ತಿನ ರಾಜ್ಯಪಾಲರ ಭಾಷಣ ಕುತೂಹಲ ಮೂಡಿಸಿದೆ. ಸಂಘರ್ಷದ ಭಾಷಣವೋ? ಸಹಕಾರ ತತ್ವದ ಭಾಷಣವೋ?., ರಾಜ್ಯಪಾಲರ ಭಾಷಣದಲ್ಲಿ ಏನಿರುತ್ತೆ? ಕಾಂಗ್ರೆಸ್ ಸರ್ಕಾರದ ಗೊತ್ತುಗುರಿ ಏನಿರುತ್ತೆ? ದೂರದೃಷ್ಟಿ ಏನು..? ಕೇಂದ್ರದ ಮೇಲೆ ಅಕ್ಕಿ ಕೊಡಲಿಲ್ಲ ಎಂಬ ಟೀಕೆಯೂ ಇರುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ.

ಮತಾಂತರ ನಿಷೇಧ ಕಾಯ್ದೆ ರದ್ದು ಕುರಿತು ಸರ್ಕಾರದ ಸಮರ್ಥನೆ ಬಗ್ಗೆ ಕುತೂಹಲ ಹೆಚ್ಚಿದೆ. ಟಿಪ್ಪು ಜಯಂತಿ, ಟಿಪ್ಪು ಪಠ್ಯದ ಬಗ್ಗೆ ಉಲ್ಲೇಖ ಇರುತ್ತಾ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ. ಅಂದು ವಿಧಾನಸಭೆಯಲ್ಲಿ ಅಂದಿನ ರಾಷ್ಟ್ರಪತಿ ಕೋವಿಂದ್ ಅವರಿಂದ ಕಾಂಗ್ರೆಸ್ ಟಿಪ್ಪು ವಿಷಯ ಪ್ರಸ್ತಾಪಿಸಿತ್ತು. ಆ ವೇಳೆ ವ್ಯಾಪಕ ಟೀಕೆಗೆ ಗುರಿಯಾಗಿ ಬಿಜೆಪಿ ಖಂಡಿಸುವ ಕೆಲಸ ಮಾಡಿತ್ತು. 

ಇನ್ನೊಂದೆಡೆ ಇತ್ತೀಚೆಗೆ ತಮಿಳುನಾಡಿನಲ್ಲೂ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿತ್ತು. ರಾಜ್ಯಪಾಲರ ಜೊತೆ ಸಹಕಾರ ತತ್ವ ಎನ್ನುವಂತಿದ್ರೆ ಭಾಷಣ ವಿವಾದಗಳಿಂದ ಹೊರತಾಗಿರುತ್ತೆ. ಒಂದು ವೇಳೆ ಸಂಘರ್ಷಕ್ಕೂ ಸೈ, ರಾಜಕೀಯ ಸಮರಕ್ಕೂ ಸೈ ಎನ್ನುವಂತಿದ್ದರೆ ಭಾಷಣದಲ್ಲಿ ವಿವಾದ ಇರಬಹುದು. ಹಾಗಾಗಿ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ಮೊದಲ ಜಂಟಿ ಅಧಿವೇಶನದ ಭಾಷಣದ ಬಗ್ಗೆ ಕುತೂಹಲ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ