ಹಿಂದೂಗಳು ಜಟ್ಕಾ ಮಾಡುವುದಾದರೆ ಮಾಡಿಕೊಂಡು ಹೋಗಲಿ, ಅವರವರು ಅವರವರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ದೇಶದಲ್ಲೇ ಪ್ರಪ್ರಥಮ ಅತಿದೊಡ್ಡ ಘನ ತ್ಯಾಜ್ಯ ಸಂಸ್ಕರಣ ಘಟಕ ಉದ್ಘಾಟನೆ ಮಾಡಿ, ಮಾಧ್ಯಮಗಳ ಜೊತೆ ಮಾತನಾಡಿ, ಮುಸಲ್ಮಾನರು ನಮ್ಮ ಮನೆಗೆ ಬಂದು ಏನು ಒತ್ತಡ ಹಾಕುವುದಿಲ್ಲ.
ನಾನು ಯಾರು ಮುಸಲ್ಮಾನರ ಮನೆಗೆ ಹೋಗಿ ಒತ್ತಡ ಹಾಕುವುದಿಲ್ಲ. ಹಲಾಲ್ ವಿಷಯದಲ್ಲಿ ಸಮಾಜವನ್ನು ಒಡೆಯುವ ದಿಕ್ಕಿನಲ್ಲಿ ಕುತಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಲಾಲ್ ಜಟ್ಕಾ ಇಂಥದ್ದನ್ನೆಲ್ಲ ಕೆಲವು ವ್ಯಕ್ತಿಗಳು, ಪಕ್ಷಗಳು ಸೃಷ್ಟಿ ಮಾಡಿದ್ದಾರೆ. ಕೆಲ ವ್ಯಕ್ತಿಗಳು ಆಡುತ್ತಿರುವ ಆಟ ಇದು. ಕರ್ನಾಟಕದಲ್ಲಿ ಜನ ಅನುಭವಿಸುತ್ತಿದ್ದಾರೆ. ಯಾರು ಯಾವುದನ್ನು ಪೂಜೆ ಮಾಡುತ್ತಾರೆ ಅದನ್ನು ಅವರು ಮಾಡಿಕೊಳ್ಳಬೇಕು. ಅವರವರು ಅವರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಹೇಳಿದರು.